ರಸ್ತೆಗೆ ಮಣ್ಣು ಸುರಿದು ವಾಹನ ಸವಾರರಿಗೆ ಅಡಚಣೆ

ಸಕಲೇಶಪುರ : ಬೆಂಗಳೂರು ಮಂಗಳೂರು ರಾಷ್ಟ್ರೀಯ ಹೆದ್ದಾರಿ 75 ಕೌಡಳ್ಳಿ ಬೈಪಾಸ್ ರಸ್ತೆಯ ಹತ್ತಿರ ರಸ್ತೆಗೆ ಮಣ್ಣು ಸುರಿದು ವಾಹನ ಸವಾರರಿಗೆ ಅಡಚಣೆ ಉಂಟಾಗಿದ್ದು ಕೂಡಲೇ ಇದಕ್ಕೆ ಸಂಬಂಧಪಟ್ಟವರು ಇದನ್ನು ತೆರವುಗೊಳಿಸಬೇಕೆಂದು ಸಾಮಾಜಿಕ ಹೋರಾಟಗಾರ ಸೈಯದ್ ಇದ್ರೀಸ್ ಆಗ್ರಹಿಸಿದ್ದಾರೆ.

ಗಂಡು ಜಿಂಕೆ ಸಾವು

ಪೊಲೀಸ್ ಇನ್ಸ್ಪೆಕ್ಟರ್ ಜಗದೀಶ್ ನೇತೃತ್ವದಲ್ಲಿ ಮರಳು ಅಡ್ಡೆ ಮೇಲೆ ದಾಳಿ. ಅಕ್ರಮವಾಗಿ ಚೀಲದಲ್ಲಿ ಮರಳು ತುಂಬಿದ್ದ ಬೈಕ್ ಗಳು ವಶ

ಸಕಲೇಶಪುರ : ತಾಲೂಕಿನಲ್ಲಿ ನಿಲ್ಲದ ಮರಳು ಮಾಫಿಯಾ. ಪಟ್ಟಣದಲ್ಲಿ ಇಂದು ಬೆಳ್ಳಂ ಬೆಳಗ್ಗೇ ಬೈಪಾಸ್ ರಸ್ತೆಯಲ್ಲಿರುವ ಹೊಸ ಸೇತುವೆಯ ಕೆಳಗೆ ಹೇಮಾವತಿ ನದಿಯ ದಡದಲ್ಲಿ ಮರಳು ಕಳ್ಳರು ಅಕ್ರಮವಾಗಿ ಮರಳನ್ನು ಚೀಲದಲ್ಲಿ ತುಂಬಿಸಿ ಸಾಗಿಸುತ್ತಿದ್ದ ವೇಳೆ ಖಚಿತ ಮಾಹಿತಿ ಮೇರೆಗೆ ಇನ್ಸ್ಪೆಕ್ಟರ್…

ಪಶ್ಚಿಮ ಬಂಗಾಳದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಮಿತಿಮೀರಿದ್ದು ರಾಷ್ಟ್ರಪತಿ ಆಳ್ವಿಕೆ ಹೇರುವಂತೆ ಆಗ್ರಹಿಸಿ ರಾಮದೂತ ಹಿಂದೂ ಮಹಾಗಣಪತಿ ಸಮಿತಿ ವತಿಯಿಂದ ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಿದರು

ಸಕಲೇಶಪುರ :ಪಶ್ಚಿಮ ಬಂಗಾಳದಲ್ಲಿ ಹಿಂದೂಗಳ ಮೇಲೆ ನಡಿಯುತ್ತಿರುವ ದೌರ್ಜನ್ಯ ಮಿತಿಮೀರಿದ್ದು ರಾಷ್ಟ್ರಪತಿ ಆಳ್ವಿಕೆ ಹೇರುವಂತೆ ಆಗ್ರಹಿಸಿದ ಪ್ರತಿಭಟನಾಕಾರರು    ವಕ್ಫ್ ಸಂಶೋಧನಾ ಕಾನೂನು ಜಾರಿಗೆ ತರಲು ಬಿಡುವುದಿಲ್ಲ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ನೀಡಿದ ಹೇಳಿಕೆಯಿಂದ ಇಡೀ ರಾಜ್ಯದಲ್ಲಿ ದಂಗೆ ಪ್ರಾರಂಭವಾಗಿದ್ದು…

ಸಕಲೇಶಪುರ ತಾಲ್ಲೂಕು ಗ್ಯಾರೆಂಟಿ ಯೋಜನಾ ಸಮಿತಿಯ ಕಚೇರಿಯಲ್ಲಿ ಬಾಬಾ ಸಾಹೇಬರ ಜನ್ಮದಿನೋತ್ಸವ ಕಾರ್ಯಕ್ರಮ.

ಸಕಲೇಶಪುರ:- ತಾಲ್ಲೂಕಿನ ಗ್ಯಾರೆಂಟಿ ಯೋಜನಾ ಸಮಿತಿಯ ಕಚೇರಿಯಲ್ಲಿ ಬಾಬಾ ಸಾಹೇಬರ 134ನೇ ಜನ್ಮದಿನೋತ್ಸವ ಕಾರ್ಯಕ್ರಮವನ್ನು ಅತ್ಯಂತ ಸಂಭ್ರಮದಿಂದ ಅರ್ಥಪೂರ್ಣವಾಗಿ ಆಚರಿಸಲಾಯಿತು.ಕಾರ್ಯಕ್ರಮ ದಲ್ಲಿ ಸಕಲೇಶಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡರು ಮತ್ತು ಗ್ಯಾರಂಟಿ ಯೋಜನ ಅನುಷ್ಠಾನ ಪ್ರಾಧಿಕಾರ ಸಮಿತಿಯ ಅಧ್ಯಕ್ಷರು ಆದ ಮುರಳಿ…

ಬಾಳ್ಳುಪೇಟೆ ಸಮೀಪ ಕಾರು ಡಿಕ್ಕಿ ಮಹಿಳೆ ಮೃತ್ಯು

ಸಕಲೇಶಪುರ: ತಾಲೂಕಿನ ಬಾಳ್ಳುಪೇಟೆ ಸಮೀಪ ಪುನರ್ವ ಲಾಡ್ಜ್ ಮುಂಭಾಗ ತಡರಾತ್ರಿ ವೇಗವಾಗಿ ಬಂದ ಇನೋವಾ ಕಾರ್ ಮಹಿಳೆ ಮೇಲೆ ಹರಿದು ಸ್ಥಳದಲ್ಲೆ ಮಹಿಳೆ ಸಾವನಪ್ಪಿರುವ ಘಟನೆ ನಡೆದಿದೆ. ಮಹಿಳೆ ಮೇಲೆ ಹರಿದ ಇನೋವಾ ಕಾರಿನ ದೃಶ್ಯ ಸಿಸಿ ಕ್ಯಾಮೆರಾ ದಲ್ಲಿ ಸೆರೆಯಾಗಿದೆ.

ಅಕ್ಕಮಹಾದೇವಿ  ಮಹಿಳಾ ವೇದಿಕೆ ವತಿಯಿಂದ  ಅಕ್ಕಮಹಾದೇವಿ ಜಯಂತಿ ಆಚರಣೆ

ಸಕಲೇಶಪುರ : ಪಟ್ಟಣದ   ಗುರುವೇಗೌಡ ಕಲ್ಯಾಣ ಮಂಟಪದಲ್ಲಿ ಶನಿವಾರದಂದು(12/04/2025) ಅಕ್ಕ ಮಹಾದೇವಿ ಮಹಿಳಾ ವೇದಿಕೆ ವತಿಯಿಂದ ಅಕ್ಕಮಹಾದೇವಿ  ಜಯಂತಿ ಕಾರ್ಯಕ್ರಮವನ್ನು ಆಚರಿಸಲಾಯಿತು.  ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು  ಕೋಮಲಾ ದಿನೇಶ್ ವಹಿಸಿದ್ದರು. ಮುಖ್ಯ ಅಥಿತಿಯಾಗಿ  ಆಗಮಿಸಿದ್ದ ಅರ್ಚನಾ ಜಯಂತ್  ಅಕ್ಕಮಹಾದೇವಿ ಭಾವಚಿತ್ರಕ್ಕೆ  ಪುಷ್ಪಾರ್ಚನೆ…

ಮೌಂಟೇನ್ ಫೈಟರ್ಸ್  ಇವರ ವತಿಯಿಂದ ಬೇಸಿಗೆ ಶಿಬಿರ

ಸಕಲೇಶಪುರ: ಪಟ್ಟಣದಲ್ಲಿ ಇದೇ ಮೊದಲ ಬಾರಿಗೆ 24 ಸಮರಕಲೆಗಳನ್ನೋಳಗೊಂಡ ಬೇಸಿಗೆ ಶಿಬಿರವನ್ನು ಸಕಲೇಶಪುರದ ಮೌಂಟೇನ್ ಫೈಟರ್ಸ್ ಇವರ ವತಿಯಿಂದ ಇದೆ ತಿಂಗಳು ತಾರೀಖು 11/04/2025 ಶುಕ್ರವಾರದಿಂದ 21/04/2025 ತಾರೀಕಿನವರೆಗೂ ನಡೆಸುತ್ತಿದ್ದು ಆಸಕ್ತಿ ಇರುವ ಪೋಷಕರು ತಮ್ಮ ಮಕ್ಕಳ ಮುಂದಿನ ಉತ್ತಮ ಭವಿಷ್ಯದ …

ಬೆಂಗಳೂರಿನಿಂದ ಕುಕ್ಕೆ ಸುಬ್ರಹ್ಮಣ್ಯಕ್ಕೆ ಹೊಸ ರೈಲು -ವಿ.ಸೋಮಣ್ಣ ಘೋಷಣೆ

ಬೆಂಗಳೂರು: ರಾಜ್ಯದ ಹಲವಾರು ಪುಣ್ಯ ಕ್ಷೇತ್ರಗಳಿಗೆ ಬರುವ ಭಕ್ತರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಇದ್ದು, ಇದೀಗ ರಾಜ್ಯದ ಪ್ರಸಿದ್ಧ ತೀರ್ಥಕ್ಷೇತ್ರ ಸುಬ್ರಮಣ್ಯಕ್ಕೆ ಏ.12 ರಿಂದ ಹೊಸ ರೈಲು ಸಂಚರಿಸಲಿದೆ ಎಂದು ಸಚಿವ ವಿ ಸೋಮಣ್ಣ ತಿಳಿಸಿದ್ದಾರೆ.ತುಮಕೂರಿನಲ್ಲಿ ಇಂದು ರೈಲ್ವೇ ಗೇಟ್…

ಶ್ರೀ ಸಿದ್ಧಿ ವಿನಾಯಕ ದೇವಸ್ಥಾನ ಹೇಮಾವತಿ ನಗರ ಚತುರ್ದಶ ವಾರ್ಷಿಕ ಮಹೋತ್ಸವ

ಸಕಲೇಶಪುರ :ಶ್ರೀ ಸಿದ್ಧಿ ವಿನಾಯಕ ದೇವಸ್ಥಾನ ಚತುರ್ದಶ ವಾರ್ಷಿಕ ಮಹೋತ್ಸವ ಹಾಗೂ ಬ್ರಹ್ಮ ಕಲಶ ಪೂಜೆಯನ್ನು ಹಮ್ಮಿಕೊಳ್ಳಲಾಗಿದೆ.ದೇವಸ್ಥಾನದಲ್ಲಿ ಗಣಪತಿ ಹೋಮ ಹಾಗೂ ಮಹಾ ಅನ್ನ ಸಮರ್ಪಣೆ ಏರ್ಪಡಿಸಲಾಗಿದೆ.ಈ ಕಾರ್ಯಕ್ರಮಕ್ಕೆ ಕುಟುಂಬ ಸಮೇತರಾಗಿ ಬಂದು ಶ್ರೀ ಸಿದ್ಧಿ ವಿನಾಯಕ ದೇವರ ಆಶೀರ್ವಾದ ಕೃಪೆಗೆ…

error: Content is protected !!