
ಸಕಲೇಶಪುರ: ಅಕ್ಕಮಹಾದೇವಿ ವೇದಿಕೆ ವತಿಯಿಂದ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಗುರುವೇಗೌಡ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದ ಉದ್ಘಾಟನೆಯನ್ನು ಮುಖ್ಯ ಅತಿಥಿಯಾಗಿದ್ದ ಭಾರತಿ ಹಾದಿಗೆ , ಪ್ರತಿಮಾ ಶನಿವಾರಸಂತೆ ಹಾಗೂ ವೇದಿಕೆ ಅಧ್ಯಕ್ಷತೆ ವಹಿಸಿದ್ದ ಕೋಮಲ ದಿನೇಶ್ , ಕಾರ್ಯದರ್ಶಿ ಗಾಯತ್ರಿ, ಮುರುಗೇಶ್, ಖಜಾಂಜಿ ಸುಮ ಅವರು ಉದ್ಘಾಟಿಸಿದರು.

ನಂತರ ಮಾತನಾಡಿದ ಭಾರತಿ ಹಾದಿಗೆಯವರು ಹೆಣ್ಣಿನ ಮೇಲೆ ನಡೆಯುತ್ತಿದ್ದ ಅತ್ಯಾಚಾರ ಶೋಷಣೆ ಕುರಿತು ವಿವರಣೆ ನೀಡಿದರು. ಮಹಿಳೆಯರು ಎಂದಿಗೂ ತಮ್ಮ ಚರಿತ್ರೆ ಬರೆಯುವಂತಹ ಕೆಲಸ ಮಾಡಬೇಕು ಎಂದರು.ಪ್ರತಿಮಾ ಶನಿವಾರಸಂತೆ ಅವರು ಮಾತನಾಡಿ ಮಹಿಳೆಯರು ತಮ್ಮ ವಯಸ್ಸನ್ನ ಲೆಕ್ಕ ಹಾಕಬಾರದು ಎಲ್ಲಾ ಕ್ಷೇತ್ರದಲ್ಲೂ ಭಾಗವಹಿಸಬೇಕು ಎಂದರು.ಅಕ್ಕಮಹಾದೇವಿ ವೇದಿಕೆಯ ಅಧ್ಯಕ್ಷರಾದ ಕೋಮಲಾ ದಿನೇಶ್ ಅವರು ಮಾತನಾಡಿ ಮಲೆನಾಡು ವೀರಶೈವ ಸಮಾಜದ ಸಹಯೋಗದೊಂದಿಗೆ ಶಿಬಿರದಲ್ಲಿ ಭಾಗವಹಿಸಿದ ಮಹಿಳೆಯರೆಲ್ಲರಿಗೂ ಧನ್ಯವಾದಗಳನ್ನ ತಿಳಿಸಿ ಮುಂದೆಯೂ ಸಾಮಾಜಿಕ ಕೆಲಸಗಳನ್ನು ಮಾಡುತ್ತೇವೆ ಎಂದರು.

ಕಾರ್ಯಕ್ರಮದಲ್ಲಿ ಫ್ಯಾಷನ್ ಸೀರೆ ಕಾಂಪಿಟೇಷನ್, ಹಲವಾರು ಆಟೋಟಗಳು, ನೃತ್ಯ ಸ್ಪರ್ಧೆ, ಹಾಡುಗಳನ್ನು ಹಾಡುವ ಮೂಲಕ ಕಾರ್ಯಕ್ರಮ ವಿಜೃಂಭಿಸಿತ್ತು.ಕನ್ನಡ ಸಾಹಿತ್ಯ ಪರಿಷತ್ತು ಸಕಲೇಶಪುರದ ಘಟಕದ ಅಧ್ಯಕ್ಷರು ಶಾರದಾ ಗುರುಮೂರ್ತಿ ಮತ್ತು ಕೊಬ್ಬರಿ ಕೆತ್ತನೆ ವಿಶಿಷ್ಟ ಕಲೆಯಲ್ಲಿ ಪರಿಣಿತರಾದ ವನಿತಾ ಮಂಜುನಾಥ್ ಸ್ವಾಮಿ ಅವರಿಗೆ ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ಕಾರ್ಯದರ್ಶಿ ಗಾಯತ್ರಿ ಮುರುಗೇಶ್, ಖಜಾಂಜಿ ಸುಮ ಸೋಮಶೇಖರ್, ಶ್ಯಾಮಲಾ ನಾಗೇಂದ್ರ, ಕುಸುಮಾ ಶಂಕರ್, ಚೈತ್ರ ನವೀನ್, ಸೌಮ್ಯ ಪ್ರೇಮ್ ಕುಮಾರ್, ಕವಿತಾ ಧರ್ಮರಾಜ್, ಬಿ ಜೆ ಪಿ ಜಿಲ್ಲಾ ಅಧ್ಯಕ್ಷರಾದ ನೇತ್ರ ಮಂಜುನಾಥ್, ಮಾಜಿ ಅಧ್ಯಕ್ಷರುಗಳಾದ ರೇಖಾ ಸುರೇಶ್, ಶಶಿಕಲಾ ಲೋಕೇಶ್ ಇನ್ನಿತರರು ಉಪಸ್ಥಿತರಿದ್ದರು