
ಸಕಲೇಶಪುರ: ತಾಲೂಕಿನ ಹಲಸುಲಿಗೆಯಲ್ಲಿರುವ ಟಸ್ಕೇರಿಯಾ ಅಕಾಡೆಮಿ ಶಾಲೆಯಲ್ಲಿ ದಿನಾಂಕ 12-03-2025ರಂದು “ಕಲ್ಲರ್ ಬೆಲ್ಟ್ ” ಕರಾಟೆ ಪರೀಕ್ಷೆ ಆಯೋಜಿಸಲಾಗಿತ್ತು.

ಈ ಶಾಲೆಯಿಂದ 60ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಪರೀಕ್ಷೆಯಲ್ಲಿ ಭಾಗವಹಿಸಿ ಉತ್ತೀಣ೯ರಾಗಿದ್ದಾರೆ ಎಂದು SHORIN RYU SHORIN KAI KARATE HASSAN DISTRICT ASSOCIATION ನ ಮುಖ್ಯಸ್ಥರಾದ ದೀಪಕ್ ಎಚ್.ಕೆ ಸರ್ ಇವರು ತಿಳಿಸಿದ್ಧಾರೆ.

ನಂತರ ಮಾತನಾಡಿದ ಕರಾಟೆ ತರಬೇತುದಾರ ಖಲಂದರ್ ಬಾಬಾ ಕರಾಟೆ ಕಲಿಯುವುದರಿಂದ ಮಕ್ಕಳಲ್ಲಿ ಮೊಬೈಲ್ ದುಶ್ಚಟದಿಂದ ಹೊರ ಬರಲು ಸಹಾಯವಾಗುತ್ತದೆ. ಮಕ್ಕಳಲ್ಲಿ ಬುದ್ದಿಶಕ್ತಿ, ದೈಹಿಕ ಶಕ್ತಿ ಮತ್ತು ಆರೋಗ್ಯವನ್ನು ಕಾಪಾಡಿಕೊಳ್ಳಲು ಕರಾಟೆಯಿಂದ ಸಾಧ್ಯ. ಕರಾಟೆಯು ಮಕ್ಕಳಲ್ಲಿ ಶಿಸ್ತು, ಸಮಯ ಪಾಲನೆಯನ್ನು ಕರಾಟೆ ಕಲಿಸಿಕೊಡುತ್ತದೆ ಎಂದು ತಿಳಿಸಿದರು.