
ಸಕಲೇಶಪುರ : ತಾಲೂಕಿನ ಗುಲಗಳಲೆ ಗ್ರಾಮದಲ್ಲಿ ಇಂದು ಸಂಜೆ ಭೀಕರ ಅಪಘಾತ. ಚಾಲಕನ ನಿರ್ಲಕ್ಷ ಹಾಗೂ ಅತಿ ವೇಗ ಈ ಅಪಘಾತಕ್ಕೆ ಮುಖ್ಯ ಕಾರಣ ಎಂದು ಸ್ಥಳೀಯರು ತಿಳಿಸಿದ್ದಾರೆ. ಮಿನಿ ಲಾರಿ ಬಂದಿದ್ದ ರಭಸದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ತುಂಬಾ ವೈರಲಾಗಿದೆ.ಸ್ಥಳೀಯರು ಎಷ್ಟೇ ಬಾರಿ ದೂರು ನೀಡಿದರು ಇದಕ್ಕೆ ಯಾವುದೇ ನಾಮಫಲಕ ಹಾಗೂ ಸಿಗ್ನಲ್ ಅಳವಡಿಸಿದೆ ಇರುವ ಕಾರಣವೇ ಅಪಘಾತಕ್ಕೆ ಮುಖ್ಯ ಕಾರಣ ಎಂದು ತಿಳಿಸಿದ್ದಾರೆ. ಬೈಕ್ ಸವಾರ ಅವಿನಾಶ್ ಹಾಸನದ ಖಾಸಗಿ ಆಸ್ಪತ್ರೆಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.