
ಸಕಲೇಶಪುರ : ಪಟ್ಟಣದ ಶ್ರೀನಿವಾಸ ಕಲ್ಯಾಣ ಮಂಟಪದ ಎದುರು ಇಂದು ಮಧ್ಯಾಹ್ನ ಎರಡು ಆಟೋಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ .

ಆಟೋದಲ್ಲಿ ಪ್ರಯಾಣ ಮಾಡುತ್ತಿದ್ದ ಮೂವರು ಆಲೂರಿನ ಉಲ್ಲಳ್ಳಿ ಅವರು ಎಂದು ತಿಳಿದು ಬಂದಿದೆ. ಆಲೂರಿನ ಆಟೋ ಚಾಲಕ ರಾಮು ಹಾಗೂ ಬಸವರಾಜು ಮತ್ತು ಕೀರ್ತಿಯವರಿಗೆ ತಲೆಗೆ ತೀವ್ರ ಪೆಟ್ಟಾಗಿದೆ.

ಮತ್ತೊಂದು ಆಟೋ ಮಳಲಿ ಗ್ರಾಮದ ಶಾಂತರಾಜು ಹಾಗೂ ಇಬ್ಬರು ಮಕ್ಕಳಿಗೆ ಸಣ್ಣ ಪುಟ್ಟ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.