


ಸಕಲೇಶಪುರ :ಮಕ್ಕಳಲ್ಲಿ ಸನಾತನ ಸಂಸೃತಿಯ ಜಾಗೃತಿ ಅತ್ಯವಶ್ಯಕ.ಮಾಜಿ ಬಲಿಜ ಸಂಘದ ಅಧ್ಯಕ್ಷರಾದ ಸತ್ಯಣ್ಣ.
ಮಹಿಳಾ ಬಲಿಜ ಸಂಘದ ವತಿಯಿಂದ ಇಂದು ನಡೆದ ಮಹಿಳಾ ದಿನಾಚರಣೆ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಜ್ಯೂತಿಯನ್ನು ಬೆಳಗುವ ಮೂಲಕ
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಮಕ್ಕಳಲ್ಲಿ
ಸನಾತನ ಸಂಸೃತಿಯ ಮಹತ್ವವನ್ನು ಕುರಿತು ಪ್ರತಿಯೊಬ್ಬ
ತಾಯಂದಿರು ತಮ್ಮ ಮಕ್ಕಳಲ್ಲಿ ಶಿಕ್ಷಣದ ಜೊತೆ ಜೊತೆಯಲ್ಲಿ ಸನಾತನ ಸಂಸೃತಿಯ ಜಾಗೃತಿ ಮೂಡಿಸುವುದು ಅನಿವಾರ್ಯ ವಾಗಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಬೆಳೆಯುವ ಜಾಗತಿಕ ವಿದ್ಯಾಮಾನ ನೋಡುತ್ತಿದ್ದರೆ ಇಂದಿನ ಮಕ್ಕಳಲ್ಲಿ
ದೇವರ ಹಾಗೂ ಸಂಸೃತಿಯ ಮೇಲೆ ಆಸಕ್ತಿ ಕಡಿಮೆ ಆಗಿ ಅನ್ಯ ಸಂಸೃತಿಯ ಆಕರ್ಷಿತ ರಾಗುತ್ತಿರುವುದು ವಿಪರ್ಯಾಸ.
ಪ್ರತಿ ಸನಾತನಿಗಳು ತಮ್ಮ ಮಕ್ಕಳಲ್ಲಿ ನೀತಿಕಥೆಗಳು, ಭಗವದ್ಗೀತೆ ಅದ್ಯಾಯನ, ರಾಮಾಯಣ ಹಾಗೂ ಮಹಾಭಾರತದಂತ ಕಾವ್ಯಗಳನ್ನು
ಮಹಿಳೆಯರು ತಮ್ಮ ಮಕ್ಕಳಲ್ಲಿ
ಬೋದಿಸುವ ಹಾಗೂ ಕಲಿಸುವ
ಸಂಕಲ್ಪ ಮಾಡಿದ್ದಲ್ಲಿ ಸನಾತನದ
ಸಂಸೃತಿಯ ಮಹತ್ವ ಅರಿವಿನಿಂದ
ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ
ತಮ್ಮ ಮಕ್ಕಳ ಬುದ್ದಿಯ ಹರಿತ
ಮತ್ತಷ್ಟು ಹುರುಪಾಗುವುದು.
ಮಕ್ಕಳು ಕೇವಲ ಶಾಲೆಯ ವಿದ್ಯಾಬ್ಯಾಸಕ್ಕೆ ಸೀಮಿತವಾಗದೆ
ಅವರಲ್ಲಿ ಕ್ರೀಡಾ ಆಸಕ್ತಿ, ಸ್ವಾತಂತ್ರಕ್ಕಾಗಿ ತಮ್ಮ ಜೀವನವನ್ನು ದೇಶಕ್ಕಾಗಿ ಹೋರಾಟ ಮಾಡಿ ಮಡಿದ ಹೋರಾಟಗಾರರ ಪರಿಚಯ, ಮತ್ತು ದೇವರ ಮೇಲಿನ ಗೌರವ, ಭಕ್ತಿ ನಂಬಿಕೆಗಳು ಆಚರಣೆಗಳನ್ನು ತಪ್ಪದೆ ಮಹಿಳೆಯರು ಮಕ್ಕಳಲ್ಲಿ ಕಲಿಸುವುದು ಅತ್ಯಾವಶ್ಯಕ ವಾಗಿದೆ ಎಂದು ತಿಳಿಸಿದ್ದರು.
ಬಲಿಜ ಸಂಘದ ಮಹಿಳಾ ದಿನಾಚಾರಣೆ ಅಂಗವಾಗಿ ನಡೆದ
ಕಾರ್ಯಕ್ರಮದಲ್ಲಿ ಮಹಿಳಾಮಣಿಯರಿಗಾಗಿ ಹಾಗೂ
ಮಕ್ಕಳಿಗೆ ಏರ್ಪಡಿಸಿದ
ಏರ್ಪಡಿಸಿದ ವಿವಿಧ ಕ್ರೀಡೆಗಳಾದ ಏಕ್ ಮಿನಿಟ್, ಮ್ಯೂಸಿಕಲ್ ಚೇರ್,
ಹೌಸಿ ಹೌಸಿ, ಕ್ರೀಡೆಗಳನ್ನು ಏರ್ಪಡಿಸಿ ಕ್ರೀಡೆ ಗಳಲ್ಲಿ ಗೆದ್ದಂತಹ
ಕ್ರೀಡಾ ಪಟುಗಳಿಗೆ ಆಕರ್ಷಕ ಬಹುಮಾನಗಳನ್ನು ಬಲಿಜ ಸಂಘದ ಸದಸ್ಯರಾದ ಗೋವಿಂದ ಸ್ವಾಮಿನಾಯ್ದು ಹಾಗೂ ಕಾಫಿ ಬೆಳಗಾರರಾದ ಅಲಸೂಳಿಗೆ ದಯಾನಂದ್ ಗೆದ್ದಂತಹ ಮಹಿಳೆಯರಿಗೆ ಹಾಗೂ ಮಕ್ಕಳಿಗೆ ಪ್ರಸಸ್ತಿ ಪ್ರದಾನ ಮಾಡಿದರು.
ಈ ಕಾರ್ಯಕ್ರಮದಲ್ಲಿ ಪುರಸಭೆಯ ಮಾಜಿ ಅದ್ಯಕ್ಷರಾದ ಹಾಗೂ ಬಲಿಜ ಸಂಘದ ಅದ್ಯಕ್ಷರಾದ ಸತೀಶ್, ವಿನಾಯಕ ಗ್ಯಾರೇಜ್ ಮಾಲೀಕರಾದ ಕುಮಾರ್, ಮಣಿ,
ಗಾಯಿತ್ರಿ, ರಾಗಿಣಿ, ಲೀಲಾವತಿ
ರಾಧ, ಶಿಕ್ಷಕಿಯರಾದ ಸುಚಿತ್ರ, ವಾಣಿ, ನಳಿನಿ, ಪವಿತ್ರ
ವೀಣಾ, ಇನ್ನಿತರರು ಹಾಜರಿದ್ದರು.