
ವಿಡಿಯೋ : ಡಿ . 31 2024ಇದೇ ಆನೆ(ವಿಕ್ರಾಂತ್)ಯನ್ನು ಕಾನಳ್ಳಿಯಲ್ಲಿ ಇಂದು ಅರಣ್ಯಾಧಿಕಾರಿಗಳು ಸಾಕಾನೆಗಳ ಮೂಲಕ ಸೆರೆ ಹಿಡಿಯಲು ತಯಾರಿ ನಡೆಸಿದ್ದಾರೆನೋಡಿ ಕಾಡಾನೆ ಯಿಂದ ಕೂಲಿ ಕಾರ್ಮಿಕರ ಹಾಗೂ ಸಾರ್ವಜನಿಕರನ್ನು ರಕ್ಷಣೆ ಮಾಡುವ ಹಾಗೂ ಮಾಹಿತಿ ನೀಡುವ ಕಾಯಕದಲ್ಲಿ ನಿರತರಾಗಿರುವ ಈ ಟಿ ಎಫ್ ಸಿಬ್ಬಂದಿ ಕೆಲಸ ಎಷ್ಟು ಕಷ್ಟ ಜಿಲ್ಲೆಯಲ್ಲಿನ ಈ ಕೆಳಕಂಡ ಗ್ರಾಮಗಳಲ್ಲಿ ಕಾಡಾನೆಗಳು ಕಂಡುಬಂದಿದ್ದು ಸುತ್ತಮುತ್ತಲಿನ ಗ್ರಾಮಸ್ಥರು ಎಚ್ಚರಿಕೆಯಿಂದ ಇರಬೇಕಾಗಿ ವಿನಂತಿ ಹೆತ್ತೂರು ಯಸಳೂರು ಹೋಬಳಿಯಯಡಕುಮರಿ ಗ್ರಾಮದ ರೈಲ್ವೆ ಟನಲ್, ಕೊಂತನಮನೆ ಗ್ರಾಮದ ಅರೆಗದ್ದೆ, ಗೊದ್ದು ಗ್ರಾಮದ ಚೌಡಿ ಬನ, ಕುಮತಹಳ್ಳಿ ಗ್ರಾಮದ ಯರಗಳ್ಳಿ ಬೆಟ್ಟ, ಮೆಕ್ಕಿರಮನೆ ಗ್ರಾಮದ ಹೆಗ್ಗೋಡ್ಲು, ಪಟ್ಲ ಗ್ರಾಮದ ಕೊಟ್ಟಿಕಲ್ಲು ಬೆಟ್ಟ, ಮಾವಿನೂರು ಗ್ರಾಮದ ಗಾಳಿಮನೆ, ಸುತ್ತಮುತ್ತ ಕಾಡಾನೆಗಳು ಕಂಡುಬಂದಿರುತ್ತವೆ.ಬೇಲೂರು ತಾಲ್ಲೂಕಿನ ಕಾನಹಳ್ಳಿ ಗ್ರಾಮದ ಕಾನಹಳ್ಳಿ ಫಾರೆಸ್ಟ್, ನೆರಳಮಕ್ಕಿ, ಹೊಳಲು ಗ್ರಾಮದ ಜೈ ದೀಪ್, ಬಕ್ಕರವಳ್ಳಿ ಗ್ರಾಮದ ನಿತಿನ್ ಹಾಗೂ ಅಸ್ಲಾಂ ಅವರ ತೋಟ, ಬ್ಯಾದನೆ ಗ್ರಾಮದ ಅಣ್ಣಾಮಲೈ ಎಸ್ಟೇಟ್, ಸುತ್ತಮುತ್ತ ಕಾಡಾನೆಗಳು ಕಂಡುಬಂದಿರುತ್ತವೆ.ಅರಕಲಗೂಡು ತಾಲ್ಲೂಕಿನ ಮಲ್ಲಿಪಟ್ಟಣ ಗ್ರಾಮದ ಬೈಸೂರು ಫಾರೆಸ್ಟ್ ಸುತ್ತಮುತ್ತ ಕಾಡಾನೆಗಳು ಕಂಡು ಬಂದಿರುತ್ತವೆಸಾರ್ವಜನಿಕರು ಕಾಡಾನೆಗಳಿಂದ ಎಚ್ಚರಿಕೆಯಿಂದ ಇರಬೇಕಾಗಿ ವಿನಂತಿ.