ಅಪರಿಚಿತ ವಾಹನ ಪಾದಚಾರಿಗೆ ಡಿಕ್ಕಿ. ಗುರುತು ಪತ್ತೆಗೆ ಮನವಿ.

ಸಕಲೇಶಪುರ :ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೊಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನೆಡೆದಿದೆ.

ತಾಲೂಕಿನ ಬಾಗೆ ಗ್ರಾಮದ ಬಳಿ ಇಂದು  ಅಪಘಾತ ನೆಡೆದಿದ್ದು. ಗಾಯಗೊಂಡಿರುವ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ. ವಾಹನ ಡಿಕ್ಕಿಯಾಗಿ ವ್ಯಕ್ತಿಯು ರಸ್ತೆ ಬದಿಯಲ್ಲಿ ಬಿದಿದ್ದನ್ನು ಕಂಡ ಸ್ಥಳೀಯರು ಆಂಬುಲೆನ್ಸ್  ನೆರವಿನಿಂದ ತಾಲೂಕು ಕ್ರಾಫರ್ಡ್ ಆಸ್ಪತ್ರೆಗೆ ರವಾನಿಸಲಾಗಿದ್ದು,ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಗಿದೆ. ಈ ವ್ಯಕ್ತಿಯ ಗುರುತು ಮಾಹಿತಿ ಇರುವವರು ಯಾರಿಗಾದರೂ ಗೊತ್ತಿದ್ದರೆ ಸಕಲೇಶಪುರ ನಗರ ಠಾಣೆಗೆ ಮಾಹಿತಿ ನೀಡುವಂತೆ ಕೋರಿದೆ.
Ph no 9480804760
            9480804781

Leave a Reply

Your email address will not be published. Required fields are marked *

error: Content is protected !!