
ಕಾರ್ಯಕ್ರಮದಲ್ಲಿ ದೇಶಾದ್ಯಂತ ಮಹಿಳೆಯರ ಮೇಲೆ ನಡೆಯುತ್ತಿರುವ ಪ್ರಾಣ,ಮಾನ,ಅವಮಾನ ದೌರ್ಜನ್ಯ-ಅತ್ಯಾಚಾರಗಳಿಂದ ರಕ್ಷಣೆ ಪಡೆದುಕೊಳ್ಳುವ ನಿಟ್ಟಿನಲ್ಲಿ ಜಾಗೃತಿ ಮೂಡಿಸುವಂತಹ ವಿಚಾರಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮಕ್ಕೆ ತಾಲೂಕಿನಾದ್ಯಂತ ಮಹಿಳೆಯರು ಹಾಗೂ ಪುರುಷರು ಜಾತಿ ಭೇದ ಮರೆತು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಬೇಕೆಂದು ಸಕಲೇಶಪುರದ ಮಹಿಳಾ ಜಾಗೃತಿ ಮಾರ್ಗದರ್ಶಿ ಅಸೋಸಿಯೇಷನ್ (ರಿ) ಅಧ್ಯಕ್ಷರಾದ ಕಲ್ಪನಾ ಕೀರ್ತಿ, ಉಪಾಧ್ಯಕ್ಷರಾದ ಕಾವ್ಯ ಕೆಸಗಾನಹಳ್ಳಿ ಹಾಗೂ ಸಂಘದ ಸದಸ್ಯರು ವಿನಂತಿಸಿದ್ದಾರೆ.