
ಬೆಂಗಳೂರು: ಸ್ಪೀಕರ್ ಪೀಠಕ್ಕೆ ಅಗೌರವ ತೋರಿದ ಆರೋಪದ ಮೇಲೆ ಸದನದಿಂದ 18 ಬಿಜೆಪಿ ಶಾಸಕರನ್ನ ಅಮಾನತು ಮಾಡಿ ವಿಧಾನಸಭೆ ಸ್ಪೀಕರ್ ಯುಟಿ ಖಾದರ್ ಆದೇಶ ಹೊರಡಿಸಿದ್ದಾರೆ.ಸದನದಲ್ಲಿ ಬಾವಿಗಿಳಿದು ಪ್ರತಿಭಟನೆ ನಡೆಸಿದ್ದ ಬಿಜೆಪಿ ಶಾಸಕರು ಸ್ಪೀಕರ್ ಯುಟಿ ಖಾದರ್ ಮೇಲೆ ಖಾಲಿ ಪೇಪರ್ ಎಸೆದಿದ್ದರು. ಸ್ಪೀಕರ್ ಪೀಠಕ್ಕೆ ಅಗೌರವ ತೋರಿದ ಹಿನ್ನೆಲೆಯಲ್ಲಿ ವಿಧಾನಸಭೆ ಕಲಾಪದಿಂದ 6 ತಿಂಗಳ ಕಾಲ 18 ಬಿಜೆಪಿ ಶಾಸಕರನ್ನ ಸ್ಪೀಕರ್ ಯುಟಿ ಖಾದರ್ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.ಅಮಾನತಾದ ಬಿಜೆಪಿ ಶಾಸಕರ ಪಟ್ಟಿ ಹೀಗಿದೆ..ದೊಡ್ಡಗೌಡನ ಪಾಟೀಲ್, ಅಶ್ವತ್ ನಾರಾಯಣ್, ಭರತ್ ಶೆಟ್ಟಿ, ಶರಣು ಸಲಗರ, ಬಿ.ಸುರೇಶ್ ಗೌಡ ಮುನಿರತ್ನ, ಚನ್ನಬಸಪ್ಪ, ಉಮಾನಾಥ ಕೋಟ್ಯಾನ್, ಬಿಪಿ ಹರೀಶ್, ಧೀರಜ್ ಮುನಿರಾಜು, ಶೈಲೇಂದ್ರ ಬೆಲ್ದಾಳೆ, ಬಸವರಾಜ ಮುತ್ತಿಮೂಡ, ಚಂದ್ರು ಲಮಾಣಿ, ರಾಮಮೂರ್ತಿ ಅಮಾನತಾದವರು.