ಹೇಮಾವತಿ ನದಿಯಲ್ಲಿ ಮುಳುಗಿ ಇಬ್ಬರ ಸಾವು

ಸಕಲೇಶಪುರ: ತಾಲ್ಲೂಕಿನ ಹೆನ್ನಲಿ ಸಮೀಪದ ಹೇಮಾವತಿ ನದಿಯಲ್ಲಿ ಮುಳುಗಿ ಇಬ್ಬರು ಮೃತಪಟ್ಟಿದ್ದು ಅಗ್ನಿಶಾಮಕ ಸಿಬ್ಬಂದಿ ಶವವನ್ನು ಹೊರ ತೆಗೆದಿದ್ದಾರೆ.
ತಾಲ್ಲೂಕಿನ ಕಾಟೇಹಳ್ಳಿ ಗ್ರಾಮದ ಭರತ್‌ (28) ಹಾಗೂ ಪ್ರಕಾಶ್‌ (30) ಮೃತರು. ಶನಿವಾರ ಮಧ್ಯಾಹ್ನ ಸಮಯದಲ್ಲಿ ಈ ಘಟನೆ ನಡೆದಿದೆ.ಎತ್ತಿನಹೊಳೆ ಯೋಜನೆಯ ಪೈಪ್‌ ಲೈನ್‌ ಹಾದು ಹೋಗಿರುವ ಸ್ಥಳದ ಸಮೀಪ, ಹೇಮಾವತಿ ನದಿಯಲ್ಲಿ ಮುಳುಗಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಪಟ್ಟಣದ ಕ್ರಾಫರ್ಡ್‌ ಆಸ್ಪತ್ರೆಗೆ ಸಾಗಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!