ವಳಲಹಳ್ಳಿ ಗ್ರಾಮ ಪಂಚಾಯಿತಿ ಬೆಳೆಗಾರರ ಸಂಘದ 4ನೇ ಮಾಸಿಕ ಸಭೆ

ವಳಲಹಳ್ಳಿ  ಗ್ರಾಮಪಂಚಾಯಿತಿ ಬೆಳೆಗಾರರ ಸಂಘದ  4ನೇ ಮಾಸಿಕ ಸಭೆ:-


ಸಕಲೇಶಪುರ:-ತಾಲ್ಲೂಕಿನ ಹೆತ್ತೂರು ಹೋಬಳಿಯ ವಳಲಹಳ್ಳಿ ಗ್ರಾಮ ಪಂಚಾಯಿತಿಯ ಬೆಳೆಗಾರ ಸಂಘದ 4ನೇ ಮಾಸಿಕ ಸಭೆಯನ್ನು ಅಧ್ಯಕ್ಷರಾದ ಎಂ. ಕೆ ದರ್ಶನ್ ಅವರ ಅಧ್ಯಕ್ಷತೆಯಲ್ಲಿ ವಳಲಹಳ್ಳಿ ಗ್ರಾಮ ಪಂಚಾಯಿತಿಯ ಬೆಳೆಗಾರ ಸಂಘದ ಕಚೇರಿಯಲ್ಲಿ ನಡೆಸಲಾಯಿತು.


ಕಾರ್ಯಕ್ರಮದಲ್ಲಿ ಬೆಳೆಗಾರರು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳ ನಡುವೆ ಉತ್ತಮ ಬಾಂಧವ್ಯ ಕಲ್ಪಿಸುವ ನಿಟ್ಟಿನಲ್ಲಿ  ಬೆಳೆಗಾರರೊಂದಿಗೆ ಸಂವಾದ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಯಸಳೂರು ವಲಯ ಅರಣ್ಯ ಅಧಿಕಾರಿಗಳಾದ ಎಸ್. ಆರ್ ಕೃಷ್ಣ ಮಾತನಾಡಿದರು. ”  ಅರಣ್ಯ ಇಲಾಖೆಯವರು ಹಾಗೂ ಬೆಳೆಗಾರರ ನಡುವೆ ಉತ್ತಮ ಬಾಂಧವ್ಯ ನಿರ್ಮಾಣವಾಗಲೂ ಅರಣ್ಯ ಇಲಾಖೆಯಲ್ಲಿ ಇರುವ ಕಾನೂನುಗಳನ್ನು ಬೆಳೆಗಾರರು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು. ಇದರಿಂದ ಬೆಳೆಗಾರರು ಡೀಮ್ಡ್ ಫಾರೆಸ್ಟ್,ಗೋಮಾಳ, ಹುಲ್ಲುಗಾವಲು ಕರಾಬು  ಸೇರಿದಂತೆ 94 ಸಿ ಗೆ ಸಂಬಂಧಿಸಿದಂತೆ ತಮಗಾದ ಸಮಸ್ಯೆಗಳ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಬೈಯುತ್ತಾ  ಹಿಡಿ ಶಾಪ ಹಾಕುತ್ತಾ ತಿರುಗುವ ಬದಲು  ಅರಣ್ಯ ಇಲಾಖೆಯ ಕಾನೂನು, ನಿಯಮಾವಳಿಗಳನ್ನು ಸರಿಯಾಗಿ ತಿಳಿದುಕೊಂಡರೆ ಸುಮ್ಮನೆ ದುಡ್ಡು ಹಾಗೂ ಸಮಯವನ್ನು ವ್ಯರ್ಥ ಮಾಡುವುದು ತಪ್ಪುತ್ತದೆ. ಹಾಗಾಗಿ ಸರ್ಕಾರದ ನಿಯಮಗಳನ್ನು ಹಾಗೂ ಅರಣ್ಯ ಇಲಾಖೆಯ ಕಾನೂನುಗಳನ್ನು ಸಮರ್ಪಕವಾಗಿ ಅರ್ಥಮಾಡಿಕೊಂಡರೆ ಖಂಡಿತವಾಗಿಯೂ ಎಲ್ಲಾ ಬೆಳೆಗಾರರಿಗೆ ರೈತರಿಗೆ ಅನುಕೂಲವಾಗುತ್ತದೆ.ಎಂದು ಸಲಹೆ ನೀಡಿದರು.ವಲಯ ಅರಣ್ಯ ಅಧಿಕಾರಿಗಳಿಂದ  ಕಾಡಾನೆ ಹಾವಳಿಯ ಪರಿಹಾರ ವಿಳಂಬ, ಸೇರಿದಂತೆ ಅರಣ್ಯ ಇಲಾಖೆಯ ಅನೇಕ ಗೊಂದಲದ ಸಮಸ್ಯೆಗಳನ್ನು ಚರ್ಚಿಸಿ ಬೆಳೆಗಾರರು ಪರಿಹಾರ ಕಂಡುಕೊಂಡರು. ಈ ಸಂದರ್ಭದಲ್ಲಿ ವಳಲಹಳ್ಳಿ ಬೆಳೆಗಾರರಿಗೆ ಕಾಳು ಮೆಣಸಿನ ವಿಮೆ ಹಣವನ್ನು ತರಿಸಿಕೊಡಲು ಶ್ರಮವಹಿಸಿದ ವಳಲಹಳ್ಳಿ ಗ್ರಾಮ ಪಂಚಾಯಿತಿ ಬೆಳೆಗಾರರ ಸಂಘದ ನಿರ್ದೇಶಕರಾದ  ಬೊಮ್ಮನಕೆರೆ ಹೇಮಂತ್ ವರಿಗೆ ವಿಶೇಷವಾಗಿ ಕುರಭತ್ತೂರು ಬೆಳೆಗಾರರ ಸಂಘದವರಿಂದ ಹಾಗೂ ವಳಲಹಳ್ಳಿ ಬೆಳಗಾರ ಸಂಘದಿಂದ ಸನ್ಮಾನ ಮಾಡಲಾಯಿತು.
ವೇದಿಕೆಯಲ್ಲಿ ಎಚ್. ಡಿ. ಪಿ.ಎ. ಮಾಜಿ ಸಂಘಟನಾ ಕಾರ್ಯದರ್ಶಿ ಕೆ.ಪಿ ಕೃಷ್ಣೇಗೌಡ,    ಗೌರವ  ಅಧ್ಯಕ್ಷರಾದ  ವಿ. ಬಿ ರಮೇಶ್,ಉಪಾಧ್ಯಕ್ಷರಾದ  ರುದ್ರೇಶ್,ಖಜಾಂಚಿ ಹಿರಿದನಹಳ್ಳಿ ಹೂವಣ್ಣ  ಗೌಡ,ಕಾರ್ಯದರ್ಶಿ ಅರುಣ್ ಗೌಡ ಕರಡಿಗಾಲ, ವಳಲಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ವಸಂತ್, ಮಾಜಿ ಅಧ್ಯಕ್ಷರಾದ ಬಾಲು ಚಿನ್ನಹಳ್ಳಿ, ಮಾಜಿ ಗೌರವ ಕಾರ್ಯದರ್ಶಿಗಳಾದ ಪಾಲಾಕ್ಷ, ಮಾಜಿ ಉಪಾಧ್ಯಕ್ಷರಾದ ವಿಶ್ವನಾಥ್,ಸೇರಿದಂತೆ ಗ್ರಾಮ ಪಂಚಾಯಿತಿ ಬೆಳೆಗಾರರ ಸಂಘದ ಎಲ್ಲಾ ನಿರ್ದೇಶಕರು ಹಾಗೂ ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ  4ನೇ ಮಾಸಿಕ ಸಭೆಯನ್ನು ಯಶಸ್ವಿಗೊಳಿಸಿದರು.

Leave a Reply

Your email address will not be published. Required fields are marked *

error: Content is protected !!