
ವಳಲಹಳ್ಳಿ ಕೂಡಿಗೆಗೆ ಪೆಟ್ರೋಲ್ ಬಂಕ್ ಅವಶ್ಯಕತೆ ಇದೆ.:- ಹಿರಿದನಹಳ್ಳಿ ಹೂವಣ್ಣ ಗೌಡ
ಸಕಲೇಶಪುರ :-ತಾಲ್ಲೂಕಿನ ವಳಲಹಳ್ಳಿ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ಸುಮಾರು 14 ಹಳ್ಳಿಗಳಿದ್ದು, ಸಾವಿರಕ್ಕೂ ಹೆಚ್ಚು ಕುಟುಂಬಗಳು ವಾಸವಾಗಿದ್ದಾರೆ. ಅಲ್ಲದೆ ಈ ಕೂಡಿಗೆಯಿಂದ ಪ್ರವಾಸಿ ತಾಣಗಳಾದ ಹೊಸಳ್ಳಿ ಗುಡ್ಡ,ಮೂಕನ ಮನೆ ಪಾಲ್ಸ್, ಬಿಸಿಲೆ ಹಾಗೂ ಸುಮಾರು ಹೋಂಸ್ಟೇ, ರೆಸಾರ್ಟ್ ಗಳಿವೆ. ಇದರಿಂದ ಪ್ರತಿನಿತ್ಯ ಸಾವಿರಾರು ಮಂದಿ ಪ್ರಯಾಣಿಕರು,ಪ್ರವಾಸಿಗರು ಬರುತ್ತಿದ್ದಾರೆ.
ಈ ಭಾಗದ ಜನರು ತಮ್ಮ ವಾಹನಗಳಿಗೆ ಪೆಟ್ರೋಲ್ ಅಥವಾ ಡೀಸೆಲ್ ಅನ್ನು ಹಾಕಿಸಲು 15 ಕಿಲೋಮೀಟರ್ ಹೆತ್ತೂರು ಅಥವಾ 25 ಕಿಲೋಮೀಟರ್ ಸಕಲೇಶಪುರಕ್ಕೆ ಹೋಗುವಂತ ಪರಿಸ್ಥಿತಿ ಇದೆ. ಅತಿ ಹೆಚ್ಚು ಜನಸಂದಣೆ ಹೊಂದಿರುವ,ಅಭಿವೃದ್ಧಿ ಹೊಂದುತ್ತಿರುವ ಈ ವಳಲಹಳ್ಳಿ ಕೂಡಿಗೆಗೆ ಒಂದು ಪೆಟ್ರೋಲ್ ಬಂಕ್ ಅನ್ನು ಸ್ಥಾಪನೆ ಮಾಡಿದರೆ ಖಂಡಿತವಾಗಿಯೂ ಈ ಭಾಗದ ವಾಹನ ಸವಾರರಿಗೆ , ಗ್ರಾಮಸ್ಥರಿಗೆ, ಪ್ರಯಾಣಿಕರಿಗೆ ಅನುಕೂಲಕರವಾಗುತ್ತದೆ. ಇಂತಹ ಪೆಟ್ರೋಲ್ ಬಂಕ್ ಒಂದನ್ನು ವಳಲಹಳ್ಳಿ ಕೂಡಿಗೆಗೆ ಸ್ಥಾಪನೆ ಮಾಡಲು ಯಾವುದೇ ಖಾಸಗಿ ಕಂಪನಿಗಳು ಅಥವಾ ಯಾವುದಾದರು ವ್ಯಕ್ತಿಗಳು ಮುಂದೆ ಬಂದರೆ ವಳಲಹಳ್ಳಿ ಕೂಡಿಗೆಯಲ್ಲಿ ಭೋಗ್ಯಕ್ಕೆ ಅಥವಾ ಕ್ರಯಕ್ಕೆ ಸ್ಥಳವನ್ನು ಮಾಡಿಕಡುವ ಕೆಲಸವನ್ನು ಮಾಡಲಾಗುವುದು. ಯಾರಾದರೂ ಆಸಕ್ತಿ ಉಳ್ಳುವವರು ಕೂಡಲೇ ಸಂಪರ್ಕ ಮಾಡಿ ಎಂದು ವಳಲಹಳ್ಳಿ ಬೆಳೆಗಾರರ ಸಂಘದ ಖಜಾಂಚಿ ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರು ಹಾಗೂ ಸಮಾಜಸೇವಕರಾದ ಹಿರಿದನಹಳ್ಳಿ ಹೂವಣ್ಣ ಗೌಡ ಹೇಳಿದರು.
ಆಸಕ್ತಿ ಉಳ್ಳುವವರು ಸಂಪರ್ಕಿಸಿ :
9449218371