ಪೊಲೀಸ್  ಇನ್ಸ್ಪೆಕ್ಟರ್ ಜಗದೀಶ್ ನೇತೃತ್ವದಲ್ಲಿ ದಾಳಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ  ಮರಳು ವಶ

ಸಕಲೇಶಪುರದ: ಅಕ್ರಮವಾಗಿ ಹೇಮಾವತಿ ಧಡದಲ್ಲಿ ಶೇಖರಣೆ ಮಾಡಿಟ್ಟಿದ್ದ ಮರಳನ್ನು ಪೋಲೀಸ್ ಇನ್ಸ್ಪೆಕ್ಟರ್ ಜಗದೀಶ್ ನೇತೃತ್ವದಲ್ಲಿ ದಾಳಿ ನಡೆಸಿ ವಶಪಡಿಸಿಕ್ಕೊಂಡಿದ್ದಾರೆ.
ಇತ್ತೀಚಿಗೆ ಪಟ್ಟಣ ಸುತ್ತ ಮುತ್ತಲಿನ  ಹೇಮಾವತಿ ನದಿ ತೀರದಲ್ಲಿ ಮರಳು ದಂಧೆ ಕೋರರು ಹಗಲಿನ ವೇಳೆ  ಅಕ್ರಮವಾಗಿ ಮರಳನ್ನು ಚೀಲಗಳಲ್ಲಿ ತುಂಬಿ ರಾತ್ರಿ ವೇಳೆ ಸ್ಕೂಟಿ ಹಾಗೂ  ಓಮಿನಿ ವಾಹನಗಳ ಮೂಲಕ  ಸಾಗಾಟ ಮಾಡುತ್ತಿರುವ ಬಗ್ಗೆ    ಸಾರ್ವಜನಿಕರ ವಲಯದಲ್ಲಿ ದೂರು ಕೇಳಿಬಂದಿದ್ದ ಹಿನ್ನಲೆಯಲ್ಲಿ
  ಇಂದು (ಮಂಗಳವಾರ)  ಅಕ್ರಮವಾಗಿ ನದಿ ತೀರದಲ್ಲಿ  ಸಂಗ್ರಹಿಸಿಟ್ಟಿದ್ದ  ಮರಳು ತುಂಬಿದ ಚೀಲಗಳನ್ನು   ಇನ್ಸ್ಪೆಕ್ಟರ್  ಜಗದೀಶ್ ನೇತೃತ್ವದಲ್ಲಿ ದಾಳಿ ನಡೆಸಿ ವಶಪಡಿಸಿ ಕೊಂಡಿದ್ದಾರೆ.
       ಈ ಕಾರ್ಯಾಚರಣೆಯಲ್ಲಿ  psi ಮಹೇಶ್, ಕ್ರೈಂ ಪಿಎಸ್ಐ ಕೃಷ್ಣಪ್ಪ, ಶ್ರೀಧರ್, ಪೃಥ್ವಿ, ಶಾಂತರಾಜು, ಚಂದ್ರಕಾಂತ್ ಹಾಗೂ ಚಾಲಕ ಮಧು ಇದ್ದರು.

Leave a Reply

Your email address will not be published. Required fields are marked *

error: Content is protected !!