ಸಕಲೇಶಪುರ ಪಟ್ಟಣದಲ್ಲಿ ಹಿಂದಿ ಮಾತನಾಡುವ ಸುಮಾರು 30 ರಿಂದ 35 ವಯಸ್ಸಿನ ಮಾನಸಿಕ ಅಸ್ವಸ್ಥನೋರ್ವ ಸಾರ್ವಜನಿಕರೊಂದಿಗೆ ರೌಡಿಯಂತೆ ವರ್ತಿಸುವ ಮೂಲಕ ಒತ್ತಾಯದಿಂದ ಹಣ ಪಡೆಯುವುದ

ಮಹಿಳೆಯರನ್ನು ಕಂಡರೆ ಮೈಮುಟ್ಟಿ ಭಿಕ್ಷೆ ಕೇಳುವುದನ್ನು ರೂಢಿ ಮಾಡಿಕೊಂಡಿದ್ದಾನೆ. , ಇತ್ತೀಚಿನ ದಿನಗಳಲ್ಲಿ ಮೈಮೇಲೆ ಪ್ರಜ್ಞೆ ಕಳೆದುಕೊಂಡವರಂತೆ ವರ್ತಿಸುವ ಈತ ಹೆಣ್ಣುಕ್ಕಳು ಕಂಡರೆ ತನ್ನ ಪ್ಯಾಂಟನ್ನು ಕಳಚಿ

ಹುಚ್ಚನಂತೆ ವರ್ತನೆ ಮಾಡಲು ಆರಂಭಿಸುತ್ತಾನೆ. ಈತನ ವರ್ತನೆ ಪಟ್ಟಣಿಗರಲ್ಲಿ ಸಾಕಷ್ಟು ಆಕ್ರೋಶ ಹುಟ್ಟುಹಾಕಿದೆ. ,‌ದಸ್ ರುಪಾಯಿ ದೇದೋ , ಧಾರೋ ಪೀನೇ (ಎಣ್ಣೆ ಕುಡಿಯ ಬೇಕು ಹತ್ತು ರೂಪಾಯಿ ಕೊಡು) ಎಂದು

ಮುಲಾಜಿಲ್ಲದೆ ಮಾತನಾಡುವ ಈತ ನಿಜವಾದ ಹುಚ್ಚನಲ್ಲ ಮದ್ಯಪಾನ ದಾಸನಾಗಿದ್ದಾನೆ. ಪಾರ್ಕಿಂಗ್ ಸ್ಥಳಗಳಲ್ಲಿ ವಾಹನಗಳ ಗಾಜುಗಳನ್ನು ಇಳಿಸಿದ್ದರೆ ವಾಹನದೊಳಗಿನ ವಸ್ತುಗಳನ್ನು ತೆಗೆದುಕೊಂಡ

ಯಾವುದೇ ಮುಲಾಜಿಲ್ಲದೆ ತೆರಳುತ್ತಾನೆ. ಈತನನ್ನು ಪ್ರಶ್ನಿಸಿದರೆ ಅಸಹ್ಯಕರವಾಗಿ ವರ್ತಿಸುವುದರಿಂದ ಈತನನ್ನು ಯಾ.ರೂ ಪ್ರಶ್ನಿಸುವ ಗೋಜಿಗೆ ಹೋಗುತ್ತಿಲ್ಲ.

ತನ್ನ ದುಂಡಾವರ್ತನೆಯನ್ನು ಮತ್ತಷ್ಟು ಹೆಚ್ಚು ಮಾಡಿಕೊಂಡಿದ್ದು ದಿನದಿಂದ ದಿನಕ್ಕೆ ಈತನ ವರ್ತನೆ ಅತಿರೇಕವಾಗುತ್ತಿದೆ. , ಸ್ಥಳಾಂತರಕ್ಕೆ ಒತ್ತಾಯ: ಪಟ್ಟಣದ ಒಂದು ತುದಿಯಿಂದ ಮತ್ತೊಂದು ತುದಿಗೆ ಅರೆಬೆತ್ತಲಾಗಿ ಓಡಾಡುವ ಈತನ ನೆಡೆ ಅತಿರೇಕಕ್ಕೆ ತಲುಪಿದ್ದು ವಾರದ ಹಿಂದೆ ಕಾಲೇಜು ಯುವತಿಯೊಬ್ಬಳ

ಕೆನ್ನೆ ಕಚ್ಚುವ ಯತ್ನ ನಡೆಸಿದ್ದ. ಇದರಿಂದ‌ ರೊಚ್ಚಿಗೆದ್ದ ಸಾರ್ವಜನಿಕರು ಧರ್ಮದೇಟು ನೀಡಿದ್ದರು. ಆದರೂ, ವರ್ತನೆ ಬದಲಾಗಿಲ್ಲ. 2 ದಿನಗಳ ಹಿಂದೆ ತಹಸೀಲ್ದಾ‌ರ್ ಕಚೇರಿ ಎದುರೇ

• ಮಹಿಳೆಯೊಬ್ಬಳ ಪರ್ಸ್‌ನ್ನು ಬಲವಂತವಾಗಿ ಕಸಿಯುವ ಯತ್ನ ನಡೆಸಿದ್ದು ಸಕಾಲಿಕವಾಗಿ ಸಾರ್ವಜನಿಕರು ಮಧ್ಯ ಪ್ರವೇಶಿಸುವ ಮೂಲಕ ಮಹಿಳೆಯನ್ನು ರಕ್ಷಿಸಿದ್ದರು. ಎಸ್.ಬಿ.ಐ ಬ್ಯಾಂಕ್ ಮುಂಭಾಗ ವೃದ್ದರೊಬ್ಬರ

ಬ್ಯಾಗ್ ಕಿತ್ತು ಪರಾರಿಯಾಗಿದ್ದ , ಇಂತಹ ಹತ್ತು ಹಲವು ಘಟನೆಗಳು ಪಟ್ಟಣದಲ್ಲಿ ನಡೆದಿವೆ. ಇದಲ್ಲದೆ ಲಿಕ್ಕರ್ ಶಾಪ್ ಗಳಲ್ಲಿ ಈತ ನೀಡಿದ್ದೇ ಹಣ, ಅನ್ಯರಿಗೆ ಇಟ್ಟಿದ್ದ ಎಣ್ಣೆ ಈತನೇ ಕುಡಿದು ಉಡಾಫೆಯಾಗಿ ವರ್ತಿಸುವುದು ಸಾಮಾನ್ಯ ಎಂಬ ಮಾತುಗಳು ಕೇಳಿ ಬರುತ್ತಿವೆ. ಲಿಕ್ಕರ್ ಶಾಫ್‌ಗಳ ಸಮೀಪವೇ

ಹೆಚ್ಚು ಕಾಲ ಕಳೆಯುವ ಈತನ ಹುಚ್ಚಾಟ ಮೇರೆ ಮೀರಿದ ಹಿನ್ನೆಲೆಯಲ್ಲಿ ಈತನನ್ನು ಬೇರೆಡೆ ಸಾಗಿಸುವಂತೆ ಸಾಕಷ್ಟು ಜನರು ಮನವಿ ಮಾಡಿದ್ದಾರೆ.

ಈತನ ಸ್ಥಳಾಂತರ ಮಾಡಲು ಯಾವ ಇಲಾಖೆಯೂ ಮುಂದೆ ಬಾರದೆ ಇರುವುದು ಸಾರ್ವಜನಿಕರಿಗೆ ಇನ್ನಷ್ಟು ತಲೆ ಬಿಸಿಯಾಗಿದೆ. , ಕನಿಷ್ಠ ಚಿಕಿತ್ಸೆ ಅಥವಾ ರಿಹಾಬ್ ಸೆಂಟರ್ ಕಳುಹಿಸುವ ಕೆಲಸ ಇಲಾಖೆ ಮಾಡಬೇಕಿದೆ .

Leave a Reply

Your email address will not be published. Required fields are marked *

error: Content is protected !!