ಮೇ 11ಮತ್ತು 12ರಂದು ತೆಂಕಲಗೂಡು ಬೃಹನ್ಮಠದಲ್ಲಿ  ವಾಗ್ಭೂಷಣ ರತ್ನ ಲಿಂ.ಶ್ರೀ ಷ ಬ್ರ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳವರ ಐದನೇ ವರ್ಷದ ಪುಣ್ಯ ಸ್ಮರಣೆ.

ಮೇ 11ಮತ್ತು 12ರಂದು ತೆಂಕಲಗೂಡು ಬೃಹನ್ಮಠದಲ್ಲಿ  ವಾಗ್ಭೂಷಣ ರತ್ನ ಲಿಂ.ಶ್ರೀ ಷ ಬ್ರ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳವರ ಐದನೇ ವರ್ಷದ ಪುಣ್ಯ ಸ್ಮರಣೆ.:-
(ಏಪ್ರಿಲ್ 6  ಭಾನುವಾರದಂದು ಮಧ್ಯಾಹ್ನ 3 ಗಂಟೆಗೆ ಶ್ರೀಗಳ ಅಧ್ಯಕ್ಷತೆಯಲ್ಲಿ  ಪ್ರಥಮ ಪೂರ್ವಭಾವಿ ಸಭೆ.)

ಸಕಲೇಶಪುರ:-  ಮೇ 11ಮತ್ತು 12ರಂದು ತೆಂಕಲಗೂಡು ಬೃಹನ್ಮಠದಲ್ಲಿ  ವಾಗ್ಭೂಷಣ ರತ್ನ ಲಿಂ.ಶ್ರೀ ಷ ಬ್ರ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳವರ ಐದನೇ ವರ್ಷದ ಪುಣ್ಯ ಸ್ಮರಣೆ, ಶ್ರೀ ಷ. ಬ್ರ ಚನ್ನ ಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಗಳವರ ಐದನೇ ವರ್ಷದ ಪಟ್ಟಾಧಿಕಾರದ ವರ್ಧಂತಿ ಮಹೋತ್ಸವ, 30ನೇ ವರ್ಷದ ಜನ್ಮ ವರ್ಧಂತಿ ಮಹೋತ್ಸವ ಕಾರ್ಯಕ್ರಮದ ನಿಮಿತ್ಯ ಶ್ರೀಮದ್ ಕಾಶಿ ಜ್ಞಾನ ಸಿಂಹಾಸನಾಧೀಶ್ವರ 1008 ಜಗದ್ಗುರು ಡಾ. ಮಲ್ಲಿಕಾರ್ಜುನ ಶಿವಾಚಾರ್ಯ ಭಗವತ್ಪಾದರ ಅಡ್ಡಪಲ್ಲಕ್ಕಿ ಮಹೋತ್ಸವ ಹಾಗೂ ಜನಜಾಗೃತಿ ಧರ್ಮ ಸಮಾವೇಶ ಕಾರ್ಯಕ್ರಮವನ್ನು ನೆರವೇರಲಿದೆ.

ಈ ಕಾರ್ಯಕ್ರಮದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ. ಲೋಕಕಲ್ಯಾಣಾರ್ಥವಾಗಿ ಹೋಮ ಹವನ ಸಾಮೂಹಿಕ ಇಷ್ಟಲಿಂಗ ದೀಕ್ಷೆ ತೆಂಕಲಗೂಡು ಬೃಹನ್ಮಠ ಪ್ರಕಾಶನದಿಂದ ಸಿದ್ಧಾಂತ ಶಿಖಾಮಣಿ ಪಾರಾಯಣ ಗ್ರಂಥದ ಉದ್ಘಾಟನೆ ಹಾಗೂ ಇನ್ನಿತರ ಕಾರ್ಯಕ್ರಮಗಳು ನೆರವೇರಲಿದೆ.

ಏಪ್ರಿಲ್ 6  ಭಾನುವಾರದಂದು ಮಧ್ಯಾಹ್ನ 3 ಗಂಟೆಗೆ ಶ್ರೀಗಳ ಅಧ್ಯಕ್ಷತೆಯಲ್ಲಿ ಸಕಲ ಸದ್ಭಕ್ತ ಶಿಷ್ಯರ ಸಮ್ಮುಖದಲ್ಲಿ ಪ್ರಥಮ ಪೂರ್ವಭಾವಿ ಸಭೆಯನ್ನು ಕರೆಯಲಾಗಿದ್ದು ಸದ್ಭಕ್ತರೆಲ್ಲರೂ ಆಗಮಿಸಿ ತಮ್ಮ ಸಲಹೆ ಸೂಚನೆಗಳನ್ನ ನೀಡುವುದರ ಮುಖೇನವಾಗಿ ಕಾರ್ಯಕ್ರಮದ ರೂಪು ರೇಶೆಗಳನ್ನು ತಿಳಿಸಬೇಕು.ಹಾಗೂ ಕಾಶಿ ಸನ್ನಿಧಿಯವರು ಪ್ರಪ್ರಥಮ ಬಾರಿಗೆ ಯಸಳೂರು ಗ್ರಾಮಕ್ಕೆ ಆಗಮಿಸುತ್ತಿರುವುದರಿಂದ ಆ ಕಾರ್ಯಕ್ರಮದ ಸಕಲ ಸಿದ್ಧತೆಗಳನ್ನು ಹೇಗೆ ಮಾಡಿಕೊಳ್ಳಬೇಕು ಹಾಗೂ ಕಾರ್ಯಕ್ರಮದ ರೂಪರೇಷೆಗಳನ್ನ ಚರ್ಚಿಸುವುದು. ಈ ಸಭೆಯು ಉದ್ದೇಶವಾಗಿದೆ. ಸಕಲ ಸದ್ಭಕ್ತರೆಲ್ಲರೂ ಆಗಮಿಸಿ ತಮ್ಮ ಸಲಹೆ ಸೂಚನೆಗಳನ್ನು ನೀಡಬೇಕೆಂದು ಈ ಮೂಲಕ .  ಶ್ರೀ ಷ.ಬ್ರ ಚನ್ನ ಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಗಳು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!