
ಸಕಲೇಶಪುರ:- ತಾಲ್ಲೂಕಿನ ಹಲಸುಲಿಗೆಯ ಕಾಟಳ್ಳಿಯಲ್ಲಿ ಶ್ರೀ ಚೌಡೇಶ್ವರಿ ಮತ್ತು ಶ್ರೀ ಬ್ರಹ್ಮ ಮುಗೇರ್ಕಳ ಹಾಗೂ ಸ್ವಾಮಿ ಕೊರಗಜ್ಜ ದೈವದ 37ನೇ ನೇಮೋತ್ಸವ ವರ್ಷದ ಕಾರ್ಯಕ್ರಮವನ್ನು 05.04.2025, 06.04.2025 ಹಾಗೂ 07.04.2025ರವರಗೆ ಮಾಡಲಾಗುತ್ತದೆ.
ದಿನಾಂಕ :- 05.04.2025 ಸಂಜೆ 4-30ರಿಂದ:-ಸ್ವಸ್ತಿ ಪುಣ್ಯಾಹ ವಾಚನ ಮುಷ್ಠಿ ಕಾಣಿಕೆ, ಅಧಿವಾಸ ನಂತರ ಮಹಾಮಂಗಳಾರತಿ ತೀರ್ಥ ಪ್ರಸಾದ ವಿನಿಯೋಗ ನೆಡೆಯುವುದು.
ದಿನಾಂಕ :-06.04.2025 ರ ಬೆಳಿಗ್ಗೆ 5-30ಕ್ಕೆ ನಾಗ ತಂಬಿಲ, ‘ಗ್ರಾಮದೇವತೆ ಶ್ರೀ ಚೌಡೇಶ್ವರಿ ಪ್ರಾಣ ಪ್ರತಿಷ್ಠಾಪನೆ’ ಎಲ್ಲಾ ದೈವ ದೇವರುಗಳಿಗೆ ನವಕ ಕಳಶ ಪೂಜೆ.
ಬೆಳಿಗ್ಗೆ 10-00 ಗಂಟೆಗೆ:-“ಶ್ರೀ ಬ್ರಹ್ಮ ಮುಗೇರ್ಕಳ ದೈವಕ್ಕೆ ನೂತನ ಖಡ್ಸಲೆ” ಒಪ್ಪಿಸುವುದು.
ರಾತ್ರಿ 7-00 ಕ್ಕೆ:-ಗ್ರಾಮದೇವತೆ ಶ್ರೀ ಚೌಡೇಶ್ವರಿ ಮತ್ತು ಚೌಡೇಶ್ವರಿ ಹಾಗೂ ಗುಳಿಗ ದೈವಗಳಿಗೆ ನೇಮೋತ್ಸವ ಹಾಗೂ ಅನ್ನ ಸಂತರ್ಪಣೆ ನಡೆಯುವುದು. ನಂತರ
12-30 ಗಂಟೆಗೆ ಶ್ರೀ ಬ್ರಹ್ಮ ಮುಗೇರ್ಕಳ ನೇಮೋತ್ಸವ”. 2 ಗಂಟೆಗೆ ಶ್ರೀ ಆದಿಮಾಯೆ ತಂಗಡಿತನ್ನಿಮಾನಿಗ, ಗರಡಿ ಇಳಿಯುವುದು.
ಹಾಗೂ
ದಿನಾಂಕ :-07.04.2025 ರ ಬೆಳಗ್ಗೆ 7-00 ಗಂಟೆಗೆ”ಸ್ವಾಮಿ ಕೊರಗಜ್ಜ ದೈವದ ನೇಮೋತ್ಸವ”ನೆಡೆಯುವುದು.
ಈ ಎಲ್ಲಾ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಭಾಗವಹಿಸುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಿ ದೇವರ ಕೃಪೆಗೆ ಪಾತ್ರರಾಗಬೇಕೆಂದು ದೈವಸ್ಥಾನದ ಆಡಳಿತ ಮಂಡಳಿಯವರು ತಿಳಿಸಿದ್ದಾರೆ.