ರೋಟರಿ ಶಾಲೆಯ  ವಿದ್ಯಾರ್ಥಿಗಳಿಗೆ ಪ್ರಥಮ ಬಹುಮಾನ

ಹಾಸನ :ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ, ಹಾಸನ ಮತ್ತು ಪೈಜಾಮ್ ಫೌಂಡೇಶನ್ ಸಂಯುಕ್ತ ಆಶ್ರಯದಲ್ಲಿ  ಹಾಸನ ಜಿಲ್ಲೆಯಲ್ಲಿರುವ ಎಲ್ಲಾ ATL ಶಾಲೆಗಳಿಗೆ ವಿಶೇಷ ಕಾರ್ಯಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಮತ್ತು ನಾವಿನ್ಯತೆಯುತವಾಗಿ ಲ್ಯಾಬ್ ಗಳಲ್ಲಿ ವಿದ್ಯಾರ್ಥಿಗಳು ತಯಾರಿಸುವ ನವೀನ ಮಾದರಿಗಳನ್ನು ಪ್ರದರ್ಶಿಸಲು  ಹಾಸನದ ಗಾಂಧಿ ಭವನದಲ್ಲಿ ಶನಿವಾರ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಸಕಲೇಶಪುರದ ರೋಟರಿ ಶಾಲೆಯ 9ನೆ ತರಗತಿ ವಿದ್ಯಾರ್ಥಿಗಳಾದ ಸೋನಿತ್, ಶಯಾನ್, ಹಾಗೂ ಮನ್ವಿತ್ ಭಾಗವಹಿಸಿ, ಕಣ್ಣು ಕಾಣದ ವರಿಗೆ ಊರುಗೋಲು (Blind stick) ಹಾಗೂ ತೋಟ ಅಥವಾ ಮನೆಯ ಹತ್ತಿರ ಕಾಡಾನೆಗಳು ಬಂದರೆ ಸೈರನ್ ಆಗುವಂತಹ ಮಾದರಿಯನ್ನು ವಿದ್ಯಾರ್ಥಿಗಳು ತಯಾರಿಸಿ  ಪ್ರದರ್ಶಿಸಿದರು. ಈ ಮಾದರಿಗೆ ಪ್ರಥಮ ಬಹುಮಾನ ಬಂದಿದೆ. ಇವರಿಗೆ ಶಾಲೆಯ ಶಿಕ್ಷಕರು ಹಾಗೂ ಆಡಳಿತ ಮಂಡಳಿಯವರು ಸಂತಸ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!