



ಸಕಲೇಶಪುರ: ಪಟ್ಟಣದ ಹೃದಯ ಭಾಗದ ಹಳೆ ಬಸ್ ನಿಲ್ದಾಣದ ಬಳಿ ಇಂದು ವಿಶ್ವ ಹಿಂದೂ ಪರಿಷತ್ ಬಜರಂಗದಳದ ವತಿಯಿಂದ ರಾಮನವಮಿ ಕಾರ್ಯಕ್ರಮವನ್ನು ನೆರವೇರಿಸಲಾಯಿತು.
ರಾಮನವಮಿ ಪ್ರಯುಕ್ತ ವಿಶ್ವ ಹಿಂದೂ ಪರಿಷತ್ ಬಜರಂಗದಳದ ವತಿಯಿಂದ ಪಾನಕ ಹಾಗೂ ಕೋಸಂಬರಿಯನ್ನು ವಿತರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಶಾಸಕರಾದ ಸಿಮೆಂಟ್ ಮಂಜುನಾಥ್, ವಿಶ್ವ ಹಿಂದೂ ಪರಿಷತ್ ಬಜರಂಗದಳದ ವಿಭಾಗ ಕಾರ್ಯದರ್ಶಿ ಮಹಿಪಾಲ,ಜಿಲ್ಲಾ ಉಪಾಧ್ಯಕ್ಷ ವಿಜಯಕುಮಾರ್, ಜಿಲ್ಲಾ ಸಹ ಕಾರ್ಯದರ್ಶಿ ಹರೀಶ್ ಕರಡಿಗಾಲ, ತಾಲೂಕು ಅಧ್ಯಕ್ಷರಾದ ಬಿರಡಹಳ್ಳಿ ಬಾಲಕೃಷ್ಣ, ಕಾರ್ಯದರ್ಶಿ ಲೋಹಿತ್, ಸಹ ಕಾರ್ಯದರ್ಶಿ ರವಿ ಹಾರ್ಲೆ ಕೂಡಿಗೆ, ಆಟೋ ರವಿ, ಕಿರಣ್ ಕರಡಿಗಾಲ ಹಾಗೂ ಸಾಗರ್ ಹೆತ್ತೂರು ಇನ್ನು ಮುಂತಾದವರು ಉಪಸ್ಥಿತರಿದ್ದರು.