






ಸಕಲೇಶಪುರ: ತಾಲೂಕು ಕಛೇರಿಯಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಆಯೋಜಿಸಿದ್ದ ಶ್ರೀ ದೇವರ ದಾಸಿಮಯ್ಯ ಜಯಂತಿ ಕಾರ್ಯಕ್ರಮದಲ್ಲಿ ಸಕಲೇಶಪುರ ಆಲೂರು ಕಟ್ಟಾಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಸಿಮೆಂಟ್ ಮಂಜು ರವರು ದೀಪ ಬೆಳಗಿಸಿ ನಂತರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಈ ವೇಳೆ ಶಾಸಕರರಾದ ಸಿಮೆಂಟ್ ಮಂಜುನಾಥ್ ಹಾಗೂ ಕರ್ನಾಟಕ ರಾಜ್ಯ ದೇವಾಂಗ ರತ್ನ ಪುರಸ್ಕೃತರಾದ ಡಾ. ಆರ್. ಎಲ್. ದೇವರಾಜು( ಬಾಳ್ಳುಪೇಟೆ )ರವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ತಾಲೂಕು ದೇವಾಂಗ ಸಂಘದ ಅಧ್ಯಕ್ಷರಾದ ಮೋಹನ್( ಮಹೇಶ್), ಉಪಾಧ್ಯಕ್ಷ ಲಕ್ಷ್ಮಿ ರಂಗನಾಥ್, ಕಾರ್ಯದರ್ಶಿ ಕೃಷ್ಣಮೂರ್ತಿ, ಖಜಾಂಚಿ ರುದ್ರೇಶ್, ನಿರ್ದೇಶಕರುಗಳಾದ ದೇವರಾಜ್ ಎಸ್. ಆರ್( ಮಾಜಿ ಪುರಸಭಾ ಉಪಾಧ್ಯಕ್ಷರು ), ದುರ್ಗೇಶ್ ದೇವರಾಜು ಕೆ. ಟಿ., ಎಸ್ಆರ್ ರವಿ,ಸುಜಿತ್, ಜಗದೀಶ್, ರಂಗ ಶೆಟ್ಟಿ, ಸದಸ್ಯರುಗಳಾದ ರಂಗಸ್ವಾಮಿ, ಶೇಷ, ರಘು, ನವೀನ್ ಶೆಟ್ಟಿ,ಪ್ರವೀಣ, ಭಾರತಿ ವಾಸುದೇವ್, ಕಲಾ ಸತೀಶ್, ಸುನಿತಾ, ಕುರುಹಿನ ಶೆಟ್ಟಿ ಸಂಘದ ಅಧ್ಯಕ್ಷರಾದ ಹೆಚ್.ಎಂ. ಚಂದ್ರ ಶೆಟ್ಟಿ, ರವಿಕುಮಾರ್ ಇನ್ನಿತರರು ಉಪಸ್ಥಿತರಿದ್ದರು.