


ವಳಲಹಳ್ಳಿ ಗ್ರಾಮಪಂಚಾಯಿತಿಯ ಉಪಾಧ್ಯಕ್ಷರಾಗಿ ಹೆಚ್. ಆರ್ ಸುಧಾಕರ್ ಅವಿರೋದವಾಗಿ ಆಯ್ಕೆ.
ಸಕಲೇಶಪುರ :- ವಳಲಹಳ್ಳಿ ಗ್ರಾಮಪಂಚಾಯಿತಿಯ ನೂತನ ಉಪಾಧ್ಯಕ್ಷರಾಗಿ ಎನ್‌ಡಿಎ ಬೆಂಬಲಿತ ಹೊಸಹಳ್ಳಿ ಸುಧಾಕರ್ ಅವಿರೋದವಾಗಿ ಆಯ್ಕೆಯಾದರು.
ಈ ಹಿಂದೆ ಉಪಾಧ್ಯಕ್ಷರಾಗಿದ್ದ ರೂಪ ರಂಜೇಶ್ ಅವರು ಅಧ್ಯಕ್ಷರಾಗಿ ಆಯ್ಕೆಯಾದ ಕಾರಣ ಸಾಮಾನ್ಯ ವರ್ಗದ ಉಪಾಧ್ಯಕ್ಷರ ಸ್ಥಾನ ತೆರವಾಗಿತ್ತು. ಇಂದು ನಡೆದ ಚುನಾವಣೆಯಲ್ಲಿ ಹೊಸಹಳ್ಳಿ ಹೆಚ್. ಆರ್ ಸುಧಾಕರ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.ಚುನಾವಣಾ ಅಧಿಕಾರಿಯಾಗಿ ತಾಲ್ಲೂಕು ದಂಡಾಧಿಕಾರಿ ಅರವಿಂದ್ ಕಾರ್ಯ ನಿರ್ವಹಿಸಿದರು
ಈ ಸಂದರ್ಭದಲ್ಲಿ ನೂತನ ಉಪಾಧ್ಯಕ್ಷರಾಗಿ ಆಯ್ಕೆಯಾದ ಎಚ್.ಆರ್ ಸುಧಾಕರ್ ಮಾತನಾಡಿ ನನ್ನನ್ನು ಆಯ್ಕೆ ಮಾಡಿದ ಗ್ರಾಮಪಂಚಾಯಿತಿ ಎಲ್ಲಾ ಸದಸ್ಯರಿಗೂ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಮುಂದಿನ ದಿನಗಳಲ್ಲಿ ಅಧ್ಯಕ್ಷರು ಹಾಗೂ ಎಲ್ಲಾ ಸದಸ್ಯರ ಸಹಕಾರದಿಂದ ಗ್ರಾಮ ಪಂಚಾಯಿತಿಯ ಅಭಿವೃದ್ದಿ ಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ” ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಹೆಚ್. ಕೆ ಕುಮಾರಸ್ವಾಮಿ,ಬಿಜೆಪಿ ತಾಲ್ಲೂಕು ಮಂಡಲ ಅಧ್ಯಕ್ಷರಾದ ವಳಲಹಳ್ಳಿ ಅಶ್ವತ್, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷರಾದ ವಳಲಹಳ್ಳಿ ರಾಜೇಗೌಡ,ಹೆತ್ತೂರು ಹೋಬಳಿ ಶಕ್ತಿ ಕೇಂದ್ರ ಅಧ್ಯಕ್ಷರಾದ ರಾಜೇಗೌಡ,ಹೆತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ನಾಗಭೂಷಣ್,ವಳಲಹಳ್ಳಿ ಬೆಳೆಗಾರರ ಸಂಘದ ಅಧ್ಯಕ್ಷರಾದ ಮರ್ಜನಹಳ್ಳಿ ದರ್ಶನ್,ವಳಲಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕಕಾರು ಹಾಗೂ ವಳಲಹಳ್ಳಿ ಬೆಳೆಗಾರರ ಸಂಘದ ಖಜಾಂಚಿಗಳಾದ ಹಿರಿದನಹಳ್ಳಿ ಹೂವಣ್ಣ ಗೌಡ,ಜೆಡಿಎಸ್ ಮುಖಂಡರಾದ ದೇವಾಕರ್, ಸುಮನ್ ಗೌಡ ಹೆತ್ತೂರು, ರಮೇಶ್,ರಂಜೇಶ್, ವಳಲಹಳ್ಳಿ ವಿಶ್ವನಾಥ್, ಸೇರಿದಂತೆ ಗ್ರಾಮ ಪಂಚಾಯಿತಿಯ ಎಲ್ಲಾ ಸದಸ್ಯರು ಹಾಗೂ ಹೆಚ್ಚಿನ ಸಂಖ್ಯೆಯ ಎನ್‌ಡಿಎ ಕಾರ್ಯಕರ್ತರು ನೆರೆದಿದ್ದರು.