
ಸಕಲೇಶಪುರ : ತಾಲೂಕಿನಲ್ಲಿ ದಿನಾಂಕ 11.04.2025 ರ ಶುಕ್ರವಾರದಂದು ಬೆಳಿಗ್ಗೆ 9:00 ಗಂಟೆಯಿಂದ ಸಂಜೆ 6:00 ಗಂಟೆಯ ವರೆಗೆ, ಹೆತ್ತೂರು ವಿವಿ ಕೇಂದ್ರದ ಆವರಣದಲ್ಲಿ ವಲಳಹಳ್ಳಿ ಹೊಸ ಮಾರ್ಗದ ತುರ್ತು ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ, ಈ ಅವಧಿಯಲ್ಲಿ ಹೆತ್ತೂರು, ಕೂಡು ರಸ್ತೆ, ಹೊಂಗಡಹಳ್ಳ ಹಾಗೂ ಬಿಸ್ಲೆ ಗ್ರಾಮಗಳ ಸುತ್ತಮುತ್ತಲ ಹಳ್ಳಿಗಳಲ್ಲಿ ವಿದ್ಯುತ್ ಸರಬರಾಜುನಲ್ಲಿ ವ್ಯತ್ಯಯವಾಗುತ್ತದೆ. ಗ್ರಾಹಕರು ಸಹಕರಿಸಬೇಕೆಂದು ಈ ಮೂಲಕ ತಿಳಿಸಿದ್ದಾರೆ.