ಕೆ.ಎಸ್.ಆರ್.ಟಿ.ಸಿ ಬಸ್ ಭೀಕರ ರಸ್ತೆ ಅಪಘಾತ. ಚಾಲಕನ ಸ್ಥಿತಿ  ಚಿಂತಾಜನಕ.

ಸೋಲೂರು: ಸಕಲೇಶಪುರ ಘಟಕಕ್ಕೆ ಸೇರಿದ ಸಾರಿಗೆ ಬಸ್ ಲಾರಿಗೆ ಹಿಂಬದಿಯಿಂದ ಡಿಕ್ಕಿಯಾಗಿರುವ ಘಟನೆ ಇಂದು ಬೆಳಿಗ್ಗೆ ನಡೆದಿದೆ. ಸಕಲೇಶಪುರ ಘಟಕದ KA18F1053 ಬಸ್ ಮುಂಜಾನೆ 4:45 ಕ್ಕೆ ಸಕಲೇಶಪುರ ಘಟಕದಿಂದ ಬೆಂಗಳೂರಿಗೆ ಹೊರಟಿತ್ತು.ಬೆಂಗಳೂರು ಮಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಸೋಲೂರು ಬಳಿ ಅಪಘಾತ ನಡೆದಿದ್ದು. ಬಸ್ಸಿನ ಚಾಲಕ ಸೋಮಶೇಖರ್ ಸ್ಥಿತಿ ಗಂಭೀರವಾಗಿದೆ.ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಇಪ್ಪತ್ತಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿದೆ. ಗಾಯಗೊಂಡರನ್ನು ಸ್ಥಳೀಯ  ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!