







ಸಕಲೇಶಪುರ : ಪಟ್ಟಣದ ಗುರುವೇಗೌಡ ಕಲ್ಯಾಣ ಮಂಟಪದಲ್ಲಿ ಶನಿವಾರದಂದು(12/04/2025) ಅಕ್ಕ ಮಹಾದೇವಿ ಮಹಿಳಾ ವೇದಿಕೆ ವತಿಯಿಂದ ಅಕ್ಕಮಹಾದೇವಿ ಜಯಂತಿ ಕಾರ್ಯಕ್ರಮವನ್ನು ಆಚರಿಸಲಾಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೋಮಲಾ ದಿನೇಶ್ ವಹಿಸಿದ್ದರು. ಮುಖ್ಯ ಅಥಿತಿಯಾಗಿ ಆಗಮಿಸಿದ್ದ ಅರ್ಚನಾ ಜಯಂತ್ ಅಕ್ಕಮಹಾದೇವಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಅಕ್ಕಮಹಾದೇವಿಯ ವೇಷಭೂಷಣ ಸ್ಪರ್ಧೆ, ಹಾಗೂ ಅಕ್ಕಮಹಾದೇವಿಯ ವಚನ ಗಾಯನ ಸ್ಪರ್ಧೆ, ವೇದಿಕೆಯ ಕಾರ್ಯಕ್ರಮವನ್ನು ನಡೆಸಲಾಯಿತು. ಇದರಲ್ಲಿ ಗೆದ್ದವರಿಗೆ ಬಹುಮಾನ ವಿತರಣೆ ಮಾಡಲಾಯಿತು.
ಹಾಗೆಯೇ ಭೀಮ ಜ್ಯುವೆಲರ್ಸ್ ನವರು ಸಹ ಭಾಗವಹಿಸಿದ್ದು ವಿಶೇಷವಾಗಿತ್ತು. ಅವರ ವತಿಯಿಂದ ಸ್ಪರ್ಧೆ ಹಾಗೂ ಲಕ್ಕಿ ಡಿಪ್ ಅನ್ನು ಕಾರ್ಯಕ್ರಮದಲ್ಲಿ ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಅಕ್ಕಮಹಾದೇವಿ ಮಹಿಳಾ ವೇದಿಕೆಯ ಕಾರ್ಯದರ್ಶಿ ಗಾಯತ್ರಿ ಮುರುಗೇಶ್, ಖಜಾಂಚಿ ಸುಮಾ ಸೋಮಶೇಖರ್ , ಬಿಜೆಪಿ ಜಿಲ್ಲಾಧ್ಯಕ್ಷರಾದ ನೇತ್ರ ಮಂಜುನಾಥ್, ಶಾರದ ಗುರುಮೂರ್ತಿ ಹಾಗೂ ಕಾರ್ಯಕಾರಿ ಸಮಿತಿಯ ಎಲ್ಲಾ ಸದಸ್ಯರು, ಮಾಜಿ ಅಧ್ಯಕ್ಷರುಗಳು, ವಿವಿಧ ಸಂಸ್ಥೆಗಳಲ್ಲಿರುವ ಪದಾಧಿಕಾರಿಗಳು, ಇನ್ನು ಮುಂತಾದವರು ಭಾಗವಹಿಸಿದ್ದರು.