ಪಶ್ಚಿಮ ಬಂಗಾಳದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಮಿತಿಮೀರಿದ್ದು ರಾಷ್ಟ್ರಪತಿ ಆಳ್ವಿಕೆ ಹೇರುವಂತೆ ಆಗ್ರಹಿಸಿ ರಾಮದೂತ ಹಿಂದೂ ಮಹಾಗಣಪತಿ ಸಮಿತಿ ವತಿಯಿಂದ ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಿದರು

ಸಕಲೇಶಪುರ :ಪಶ್ಚಿಮ ಬಂಗಾಳದಲ್ಲಿ ಹಿಂದೂಗಳ ಮೇಲೆ ನಡಿಯುತ್ತಿರುವ ದೌರ್ಜನ್ಯ ಮಿತಿಮೀರಿದ್ದು
ರಾಷ್ಟ್ರಪತಿ ಆಳ್ವಿಕೆ ಹೇರುವಂತೆ ಆಗ್ರಹಿಸಿದ ಪ್ರತಿಭಟನಾಕಾರರು
   ವಕ್ಫ್ ಸಂಶೋಧನಾ ಕಾನೂನು ಜಾರಿಗೆ ತರಲು ಬಿಡುವುದಿಲ್ಲ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ನೀಡಿದ ಹೇಳಿಕೆಯಿಂದ ಇಡೀ ರಾಜ್ಯದಲ್ಲಿ ದಂಗೆ ಪ್ರಾರಂಭವಾಗಿದ್ದು
      ಮುರ್ಷೇದಾಬಾದ್ ನಲ್ಲಿ ಹಿಂದೂಗಳು ತಮ್ಮ ಸ್ವಂತ ಊರನ್ನು ಬಿಟ್ಟು ಪಲಾಯನ ಮಾಡುತ್ತಿದ್ದಾರೆ.
        ಮುರ್ಷೇದಾಬಾದ್ ನಲ್ಲಿ ಇರುವ ಹಿಂದೂಗಳು ತಮ್ಮ ಮನೆ ಮಠ,ಅಸ್ಥಿ, ಕಟ್ಟಡ ಜಮೀನು ಎಲ್ಲವನ್ನು ಬಿಟ್ಟು ನಿರಾಶಿತರ ಕೇಂದ್ರದಲ್ಲಿ ತಮ್ಮದೇ ನೆಲದಲ್ಲಿ ಪರಕೀಯರಾಗಿ ಬದುಕುವ ರೀತಿ ವಾತಾವರಣ ನಿರ್ಮಾಣ ಮಾಡಿ ಪಲಾಯನ ಮಾಡಲು ಮನೆಗಳಿಗೆ ಬೆಂಕಿ ಹಚ್ಚೊದು ಕಲ್ಲು ತೂರಾಟ ಮಾಡಿ ಭಯಭೀತಗೊಳಿಸಿದ್ದಾರೆ ಇದನ್ನ ಹಿಂದೂ ಸಮಾಜ ಸಹಿಸುವುದಿಲ್ಲ ಎಂದು ರಘು ಸಕಲೇಶಪುರ ಆಕ್ರೋಶ ವ್ಯಕ್ತ ಪಡಿಸಿದ್ದಾರೆ
       ಮಮತಾ ಬ್ಯಾನರ್ಜಿ ತಾನು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡುವಾಗ ಯಾವುದೇ ದ್ವೇಷ ಭಾವನೆಯಿಂದ ಒಂದು ಸಮುದಾಯದ ಪರವಾಗಿ ನಿಲ್ಲದೆ ಕೋಮುಭಾವನೆ ಪ್ರಚೋದನೆ ಮಾಡುವುದಿಲ್ಲ ಎಂದು ಸಂವಿಂಧಾನದ ಅಡಿಯಲ್ಲಿ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಮಾಡಿದ್ದ ಪ್ರಮಾಣದ ವಿರುದ್ಧವಾಗಿ ಮುಸ್ಲಿಂ ಸಮುದಾಯವನ್ನು ಓಲೈಕೆ ಮತ್ತು ತುಷ್ಟಿಕರಣ ಅತಿರೇಕವಾಗಿ  ಮಾಡುತ್ತಿದ್ದು ಪಶ್ಚಿಮ ಬಂಗಾಳದಲ್ಲಿ ನಡಿಯುತ್ತಿದೆ
     ಮುಖ್ಯಮಂತ್ರಿ ಅಂದರೆ ರಾಜ್ಯದ ಪ್ರತಿ ಪ್ರಜೆಯ ರಕ್ಷಣೆ ಮತ್ತು ಅವನ ಸುರಕ್ಷತೆ ಮಾಡಬೇಕಾಗಿದ್ದು ಮಮತಾ ಬ್ಯಾನರ್ಜಿ ಅವರ ಕರ್ತವ್ಯ ಆದರೆ ಹಿಂದೂ ಎಂಬ ಕಾರಣಕ್ಕೆ ಮರಣಾoತಿಕ ಹಲ್ಲೆ ಕೊಲೆ ಲೂಟಿ ಅತ್ಯಾಚಾರ ನಡೆಯುತ್ತಿದ್ದರೂ ಕಣ್ಣು ಮುಚ್ಚಿ ಕುಳಿತಿರುವ ಪಶ್ಚಿಮ ಬಂಗಾಳದ ಸರ್ಕಾರವನ್ನ ವಜಾ ಮಾಡಿ ರಾಷ್ಟ್ರಪತಿ ಆಳ್ವಿಕೆ ಹೇರಿ ಸಾರ್ವಜನಿಕರಿಗೆ ಹಿಂದುಗಳಿಗೆ ನ್ಯಾಯ ಒದಗಿಸಬೇಕು ಎಂದು ರಾಷ್ಟ್ರಪತಿಗಳು ಮತ್ತು ಪ್ರಧಾನಮಂತ್ರಿಗಳಿಗೆ ಮನವಿ ಮಾಡಿದರು.
       ಪಶ್ಚಿಮ ಬಂಗಾಳದಲ್ಲಿ ಈಗ ನಡೆದಿರುವ ಘಟನೆಯಲ್ಲ ಚುನಾವಣಾ ಪೂರ್ವ ಮತ್ತು ಫಲಿತಂಶ ಬಂದ  ನಂತರ ನಡೆದಿರುವ ದೌರ್ಜನ್ಯಗಳು ಕೊಲೆಗಳು ಹಲ್ಲೆಗಳು ನಾಗರೀಕ ಸಮಾಜ  ತಲೆ ತಗ್ಗಿಸುವಂಥದ್ದು
        ಮಹಿಳೆಯರ ಮೇಲೆ ಅತ್ಯಾಚಾರ ಮಾಡಿ ಬಾಂಗ್ಲಾ ಕ್ಕೆ ಹೋಗಿ ತಲೆ ಮರೆಸಿಕೊಂಡು ಗುಂಡಾಗಿರಿ ಮಾಡೋದು ಎಗ್ಗಿಲ್ಲದೆ ನಡಿಯುತ್ತಿದೆ.
      ಅಕ್ರಮ ಬಂದ್ಲಾದೇಶಿ ಮುಸ್ಲಿಂ ಒಳನುಸುಳುಕೋರರನ್ನ ಭಾರತ ಗಡಿ ಒಳಗಿನಿಂದ ಅತಿ ಹೆಚ್ಚು ಬರುತ್ತಿರೋದು ಪಶ್ಚಿಮ ಬಂಗಾಳದಿಂದ. ಇದು ಭಾರತದ ಆಂತರಿಕ ಭದ್ರತೆಗೆ ಕುತ್ತು ಬರುತ್ತದೆ.
     ಪಶ್ಚಿಮ ಬಂಗಾಳದಲ್ಲಿ ಹಿಂದೂ ಸಮಾಜದದ ಮೇಲೆ ಹಿಂದೂ ಹೆಣ್ಣಮಕ್ಕಳ ಮೇಲೆ ನಡಿಯುತ್ತಿರುವ ದೌರ್ಜನ್ಯ ವಿರುದ್ಧ ಸೇನಾಕಾರ್ಯಾಚರಣೆ ಆಗಬೇಕಿದ್ದು ಪಶ್ಚಿಮ ಬಂಗಾಳದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಗೆ ತಂದು ಶಾಂತಿ ನೆಲಸಲು ಸೇನೆ ನಿಯೋಜಿಸಿ ಹಿಂದೂಗಳ ಮೇಲೆ ದಬ್ಬಾಳಿಕೆ ಮಾಡಿದ ದುಷ್ಟರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಸಮಿತಿ ಸದಸ್ಯ ಮಂಜುನಾಥ ಕಬ್ಬಿನಗದ್ದೆ ಆಗ್ರಹಿಸಿದರು
             ಈ ಸಂಧರ್ಬದಲ್ಲಿ ಹಿಂದೂ ಮುಖಂಡ ಶಿವೂ ಜಿಪ್ಪಿ, ವಿದ್ಯಾರ್ಥಿ ಪ್ರಮುಖ್ ಜತಿನ್, ವಿನು,ಮೋಹನ್, ಹರ್ಷ, ಸುಜಯ್, ಕೀರ್ತನ್ ಇತರರು ಉಪಸ್ಥಿತಿ ಇದ್ದರು

Leave a Reply

Your email address will not be published. Required fields are marked *

error: Content is protected !!