

ಸಕಲೇಶಪುರ : ತಾಲೂಕಿನಲ್ಲಿ ನಿಲ್ಲದ ಮರಳು ಮಾಫಿಯಾ.
ಪಟ್ಟಣದಲ್ಲಿ ಇಂದು ಬೆಳ್ಳಂ ಬೆಳಗ್ಗೇ ಬೈಪಾಸ್ ರಸ್ತೆಯಲ್ಲಿರುವ ಹೊಸ ಸೇತುವೆಯ ಕೆಳಗೆ ಹೇಮಾವತಿ ನದಿಯ ದಡದಲ್ಲಿ ಮರಳು ಕಳ್ಳರು ಅಕ್ರಮವಾಗಿ ಮರಳನ್ನು ಚೀಲದಲ್ಲಿ ತುಂಬಿಸಿ ಸಾಗಿಸುತ್ತಿದ್ದ ವೇಳೆ ಖಚಿತ ಮಾಹಿತಿ ಮೇರೆಗೆ ಇನ್ಸ್ಪೆಕ್ಟರ್ ಜಗದೀಶ್ ನೇತೃತ್ವದಲ್ಲಿ ದಾಳಿ ನಡೆಸಿದಾಗ ಬೈಕ್ ಸವರಾರು ಬೈಕ್ ಅನ್ನು ಬಿಟ್ಟು ಪರಾರಿಯಾಗಿದ್ದಾರೆ. ಪೊಲೀಸರು ಬೈಕ್ ಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಪೊಲೀಸ್ ಪೇದೆಗಳಾದ ಯೋಗೇಶ್, ಕೌಶಿಕ್, ರಾಕೇಶ್ ಇದ್ದರು.
