
ಸಾಹಿತಿ ವಿಶ್ವಾಸ್ . ಡಿ.ಗೌಡರ ಬಾಳೊಂದು ಚೈತ್ರಾಮಯ 3ನೇ ಕೃತಿ ಲೋಕಾರ್ಪಣೆ
ಶ್ರೀ ಪುಷ್ಪಗಿರಿ ಮಹಾಸಂಸ್ಥಾನ ಶ್ರೀ ಮಠ, ಹಳೇಬೀಡು ಮತ್ತು ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ (ರಿ), ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಶ್ರೀ ಪುಷ್ಪಗಿರಿ ಮಹಾ ಸಂಸ್ಥಾನ ಮಠದಲ್ಲಿ 14ನೇ ವಾರ್ಷಿಕೋತ್ಸವದ ಪ್ರಯುಕ್ತ ಅಖಿಲ ಭಾರತ ನಾಲ್ಕನೇ ಸ್ಪಂದನ ಸಿರಿ ಶಿಕ್ಷಣ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮ್ಮೇಳನದಲ್ಲಿ ಹಾಸನ ಜಿಲ್ಲೆಯ, ಸಕಲೇಶಪುರ ತಾಲ್ಲೂಕಿನ ಖ್ಯಾತ ಬರಹಗಾರ, *ಕತ್ತರಿ ಘಟ್ಟ ಮತ್ತು ಹರಿಸೇವಾ* , *ನೆನಪುಗಳ ಖಾತೆ* ಕೃತಿಗಳ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ಪಾದರ್ಪಣೆ ಮಾಡಿರುವ ಶ್ರೀ ವಿಶ್ವಾಸ್.ಡಿ.ಗೌಡ ರವರ *ಬಾಳೊಂದು ಚೈತ್ರಾಮಯ* ಎಂಬ 3ನೇ ಕೃತಿಯು ಇದೇ ಕಾರ್ಯಕ್ರಮದಲ್ಲಿ ಬಿಡುಗಡೆಯಾಗಲಿದೆ. ಇತ್ತೀಚೆಗೆ ಪತ್ರಿಕೆಗಳಲ್ಲಿ ತಮ್ಮ ಬರಹಗಳ ಮೂಲಕ ಖ್ಯಾತಿ ಪಡೆದಿರುವ ವಿಶ್ವಾಸ್ ರವರು ತಮ್ಮ ಅಂಕಣ ಬರಹಗಳನೆಲ್ಲ ಸೇರಿಸಿ ಸುಂದರವಾದ 3ನೇ ಕೃತಿಯೊಂದನ್ನು ಮಾಡಿದ್ದಾರೆ. ಇವರ ಅನೇಕ ಕೃತಿಗಳು ಮುದ್ರಣ ಹಂತದಲ್ಲಿವೆ. ಮುದ್ರಣ ಹಂತದಲ್ಲಿರುವ ಕೃತಿಗಳು ಕೂಡ ಅಂಕಣ ಬರಹಗಳ ಜೊತೆಯಲ್ಲಿ ವಿಮರ್ಶಾ ಸಾಹಿತ್ಯದ ಕೃತಿಗಳಾಗಿವೆ. ಇವರ ಅನೇಕ ಉತ್ತಮ ಬರಹಗಳನ್ನು ಸೇರಿಸಿಕೊಂಡು *ಬಾಳೊಂದು* *ಚೈತ್ರಾಮಯ* ಎಂಬ ಕೃತಿಯನ್ನು ಮಾಡಿದ್ದಾರೆ.ಈ ಕೃತಿಯು ಈ ಸುಂದರವಾದ ಕಾರ್ಯಕ್ರಮದಲ್ಲಿ ಬಿಡುಗಡೆಯಾಗಲಿದೆ.
ಸಮ್ಮೇಳನವು ಶ್ರೀ ಡಾ. ಸೋಮಶೇಖರ್ ಶಿವಾಚಾರ್ಯ ಮಹಾಸ್ವಾಮಿಜಿಯವರ ಆಶಯ ಆಶೀರ್ವಾದಗಳೊಂದಿಗೆ ಆಯೋಜನೆಗೊಂಡು ಶ್ರೀಮತಿ ಜಿ.ಎಸ್ ಕಲಾವತಿ ಮಧುಸೂದನ್ ಸಂಸ್ಥಾಪಕ ರಾಜ್ಯಾಧ್ಯಕ್ಷರು(ಕ.ರಾ.ಸ್ಫ.ಸಿ.ವೇ) ರವರ ಅಧ್ಯಕ್ಷತೆಯಲ್ಲಿ ನಡೆಯಲಿದೆ .ಈ ಸಮ್ಮೇಳನದ ಅಧ್ಯಕ್ಷರು ಶಿಕ್ಷಕಿ,ಸಾಹಿತಿ ಶ್ರೀಮತಿ ಎಂ.ಆಶಾ ಕಿರಣ್ ಹಾಗೂ ಹಿರಿಯ ಸಾಹಿತಿ ಶ್ರೀಮತಿ ಸುಶೀಲ ಸೋಮಶೇಖರ್ ರವರು ಕೃತಿಗಳನ್ನು ಬಿಡುಗಡೆ ಮಾಡಲಿದ್ದಾರೆ.