
ಸಕಲೇಶಪುರ: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಂದ ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕು ಬಿರಡಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ ಸತೀಶ್ ಹಾಗೂ ಪಿಡಿಓ ಗಿರೀಶ್ ಉತ್ತಮ ಪಂಚಾಯತಿಗೆ ನೀಡುವ ಪ್ರಶಸ್ತಿಯನ್ನು ಬಿಹಾರದ ಮಧುನಿಯಲ್ಲಿ ಸ್ವೀಕರಿಸಿದ್ದಾರೆ.
ಶೂನ್ಯ ಕಾರ್ಬನ್ (ಇಂಗಾಲ) ಹೊರಸೂಸುವಿಕೆ ಹಾಗೂ ನವೀಕರಿಸಬಹುದಾದ ಇಂಧನ ಬಳಕೆಯಲ್ಲಿನ ಸಾಧನೆಗಾಗಿ ತಾಲೂಕಿನ ಬಿರಡಹಳ್ಳಿ ಗ್ರಾಮ ಪಂಚಾಯಿತಿಗೆ 2025ನೇ ಸಾಲಿನ ಕ್ಲೆ‘ಮೇಟ್ ಆಕ್ಷನ್ ಸ್ಪೆಷಲ್ ಪಂಚಾಯತ್ ಅವಾರ್ಡ್ (ಕಾಸ್ಪಾ) ರಾಷ್ಟ್ರಮಟ್ಟದ ಪ್ರಶಸ್ತಿ ಪಂಚಾಯತಿಗೆ ದೊರಕಿದ್ದು ಕರ್ನಾಟಕದಿಂದ ಏಕೈಕ ಪಂಚಾಯತಿ ಇದಾಗಿದೆ.