

ಸಕಲೇಶಪುರ: ಕೃಷಿ ಪತ್ತಿನ ಸಹಕಾರ ಸಂಘದ (ಪಿ ಎಲ್ ಡಿ ಬ್ಯಾಂಕ್) ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ವೈ. ಪಿ. ರಾಜೇಗೌಡ್ರು ಹಾಗೂ
ಉಪಾಧ್ಯಕ್ಷರಾಗಿ ಸಾಮಾಜಿಕ ಹೋರಾಟಗಾರರು ಹಾಗೂ ದಲಿತ ಸಂಘ ಜಿಲ್ಲಾ ಸಂಚಾಲಕರದ ವಳಲಹಳ್ಳಿ ವೀರೇಶ್ ಆವಿರೋದವಾಗಿ ಆಯ್ಕೆಯಾಗಿದ್ದಾರೆ.
ಈ ಸಂದರ್ಭದಲ್ಲಿ ಸಕಲೇಶಪುರ,ಆಲೂರು ಕಟ್ಟಾಯ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡರು ಹಾಗೂ ಗ್ಯಾರೆಂಟಿ ಯೋಜನೆ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಮುರಳಿ ಮೋಹನ್, ಬ್ಲ್ಯಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಬೈರಮುಡಿ ಚಂದ್ರು, ಮಾಜಿ ತಾಲೂಕು ಪಂಚಾಯಿತಿ ಉಪಾಧ್ಯಕ್ಷರಾದ ಕೃಷ್ಣೇ ಗೌಡ ಕರಡಿಗಾಲ,ಗೊದ್ದು ಲೋಕೇಶ್, ಕಾಂಗ್ರೆಸ್ ಮುಖಂಡರಾದ H H ಉದಯ್, ತಾಲೂಕು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಘಟಕದ ಅಧ್ಯಕ್ಷರಾದ ಪ್ರಶಾಂತ್ ಕಲ್ಗಣೆ, ದೇವರಾಜ್ ಬೈಕೆರೆ, ಗಿರೀಶ್ ಕಲ್ಗಣೆ, ರುದ್ರೇಶ್ ವಳಹಳ್ಳಿ, ತಾಲೂಕು ಪಂಚಾಯಿತಿ ಮಾಜಿ ಸದಸ್ಯರಾದ ಲೋಕೇಶ್ ಹಾಗೂ ಪಿ ಎಲ್ ಡಿ ಬ್ಯಾಂಕಿನ ನಿರ್ದೇಶಕರುಗಳು ಸೇರಿದಂತೆ ಇನ್ನು ಮುಂತಾದವರು ಹಾಜರಿದ್ದರು.