

ಸಕಲೇಶಪುರ : ತಾಲೂಕಿನ ಒಸೂರು ಎಸ್ಟೇಟ್ ಹತ್ತಿರ ಹಲಸುಲಿಗೆ ಕಾಫಿ ಬೋರ್ಡ್ ಕಲ್ಪಿಸುವ ರಸ್ತೆ ಮಧ್ಯೆ ಇರುವ ರೈಲ್ವೆ ಗೇಟ್ಗಳನ್ನು ಇಂದು ಬೆಳಗಿನ ಜಾವ ಸುಮಾರು3:30ರ ಸಮಯದಲ್ಲಿ ಒಂಟಿ ಕಾಡಾನೆ ಮುರಿದು ತೋಟಕ್ಕೆ ನುಗ್ಗಿರುವ ಘಟನೆ ನಡೆದಿದೆ. ಇದರ ಪರಿಣಾಮ ವಾಹನ ಸವಾರರು ಹಲಸುಲಿಗೆಗೆ ಹೋಗುವರು ಹಾಗೂ ಬರುವವರು ಹರಸಾಹಸ ಪಡಬೇಕಾದ ಸಂದರ್ಭ ನಿರ್ಮಾಣವಾಗಿದೆ.