
ಸಕಲೇಶಪುರ: ವಿಜಯ ಕರ್ನಾಟಕ ವರದಿಗಾರರಾದ ಅರುಣ್ ರಕ್ಷಿದಿ ಅವರ ತಾಯಿ ಮೋಟಮ್ಮ(91) ಅನಾರೋಗ್ಯದಿಂದ ಶುಕ್ರವಾರ ಸಂಜೆ ಮೃತಪಟ್ಟರು. ಮೃತರಿಗೆ ಪತ್ರಕರ್ತ ಅರುಣ್ ರಕ್ಷಿದಿ ಸೇರಿದಂತೆ ಮೂವರು ಗಂಡು ಹಾಗೂ ಮೂರುಜನ ಹೆಣ್ಣುಮಕ್ಕಳನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಸ್ವಗ್ರಾಮ ಗಾಣದಹೊಳೆಯಲ್ಲಿ ಶನಿವಾರ ಬೆಳಗ್ಗೆ 10 ಕ್ಕೆ ನೆರವೇರಲಿದೆ ಎಂದು ಅರುಣ್ ರಕ್ಷಿದಿ ತಿಳಿಸಿದ್ದಾರೆ.