ಹಾಸನ : ತಲೆನೋವಿನಿಂದ ಬಳಲುತ್ತಿದ್ದ ಯುವಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು, ಇದಕ್ಕೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ ಮೃತನ ಸಂಬಂಧಿಕರು ಹಾಗೂ • ಗ್ರಾಮಸ್ಥರು ನಗರದ ಖಾಸಗಿ ಆಸ್ಪತ್ರೆ ಎದುರು ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿದರು. , ಕೇವಲ 21ವರ್ಷದ ಧರಣಿ ಮೃತ ಹಾಸನ ತಾಲ್ಲೂಕಿನ• ಮೊಸಳೆಹೊಸಳ್ಳಿ ಮುತ್ತಿಗೆ ಹೀರೇಹಳ್ಳಿ ಯುವಕನಾಗಿದ್ದು . ಸಮೀಪದ ಪುಟ್ಟೇಗೌಡ (ಸ್ವಾಮಿಗೌಡ)ಎಂಬುವರ ಪುತ್ರನಾದ ಧರಣಿ ಗುರುವಾರ ರಾತ್ರಿ ತೀವ್ರ ತಲೆನೋವಿನಿಂದ ಬಳಲುತ್ತಿದ್ದ ಹಿನ್ನೆಲೆ • ಶುಕ್ರವಾರ ಬೆಳಗ್ಗೆ 10ರ ಆಸ್ಪತ್ರೆಗೆ ಕರೆತಂದು ದಾಖಲಿಸಲಾಯಿತು. ವೈದ್ಯರು ಶಸ್ತ್ರಚಿಕಿತ್ಸೆ ಮಾಡುತ್ತೇವೆ ಎಂದು ತಲೆಯ ಕೂದಲನ್ನು ತೆಗೆದು ಅಂತಿಮವಾಗಿ ಹೆಚ್ಚಿನ ಚಿಕಿತ್ಸೆಗೆ • ಬೇರೆಡೆಗೆ ಕರೆದೊಯ್ದಿರಿ ಎಂದು ತಿಳಿಸಿದರು ಎಂದು ಮೃ *ತನ ಸಂಬಂಧಿ ಹಾಗೂ ಗ್ರಾಮಸ್ಥ ರವಿ ಆರೋಪಿಸಿದರು. “ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರೂ ಮೃತ ಧರಣಿಗೆ ದೊಡ್ಡಮಟ್ಟದ • ಬ್ರೈನ್ ಟ್ಯೂಮರ್ ಆಗಿತ್ತು. ಎಲ್ಲ ರೀತಿಯಲ್ಲೂ ಪರೀಕ್ಷಿಸಿ ಹೆಚ್ಚಿನ ಚಿಕಿ*ತ್ಸೆಗೆ ದೊಡ್ಡ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಂದು ಸಲಹೆ ನೀಡಿದ್ದೆವು. ಆದರೆ • ಮೃತನ ಕಡೆಯವರು ಮಾಡಿರುವ ಆರೋಪ ಸುಳ್ಳು.ಅಳುವವರ ಬಗ್ಗೆ ಅನುಕಂಪ ತೋರುವವರು ವೈದ್ಯರ ಪ್ರಯತ್ನವನ್ನು ಗಮನಿಸಬೇಕು. ಎಂದರು – ಡಾ.ಸೌಮ್ಯ ಆಸ್ಪತ್ರೆ ಮುಖ್ಯಸ್ಥರು ಹಾಸನ : ಆ್ಯಂಬುಲೆನ್ಸ್‌ನಲ್ಲಿ ಶ *ವವಿಟ್ಟು ಬೇರೆ ಆಸ್ಪತ್ರೆಗೆ ಕಳುಹಿಸಲು ಮುಂದಾಗಿ ಅಲ್ಲೇ ಚಿಕಿತ್ಸೆ ನೀಡುವಂತೆ ಮಾಡಿದರು. ಆದರೆ• ಮೃತಪಟ್ಟಿರುವುದನ್ನು ತಿಳಿದು ಪ್ರಶ್ನೆ ಮಾಡಿದಾಗ ಸಬೂಬು ಹೇಳಿದರು” ಎಂದು ಮೃತನ ಸಂಬಂಧಿಕರು ದೂರಿದರು. ಹಲ್ಲೆ ಆರೋಪ?: ಧರಣಿ ಸಾವಿನ ವಿಷಯ ತಿಳಿದ ಗ್ರಾಮಸ್ಥರು ಆಸ್ಪತ್ರೆ ಬಳಿಗೆ ಆಗಮಿಸಿ ಆಕ್ರೋ*ಶ ವ್ಯಕ್ತಪಡಿಸಿದರು. ಈ ವೇಳೆ• ಪೊಲೀಸರು ಮೃತನ ಸಹೋದರ ರವಿ ಮೇಲೂ ಹಲ್ಲೆ ಮಾಡಿದರು” ಎಂದು ದೂರಿದರು. ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ್ದ ಜನರನ್ನು ಪೊಲೀಸರು ಚದುರಿಸಿದರು.