ಸಾಹಿತಿ ವಿಶ್ವಾಸ್. ಡಿ. ಗೌಡರ ‘ಚೈತ್ರದ ಚೈತನ್ಯ’ ನಾಲ್ಕನೇ  ಕೃತಿ ಏಪ್ರಿಲ್ 28ರಂದು  ಲೋಕಾರ್ಪಣೆ

ಚುಟುಕು ಸಾಹಿತ್ಯ ಪರಿಷತ್ತು, ಸಕಲೇಶಪುರ ವತಿಯಿಂದ ಸಾಹಿತಿ ವಿಶ್ವಾಸ್. ಡಿ. ಗೌಡರ ನಾಲ್ಕನೇ ಕೃತಿ  *”ಚೈತ್ರದ ಚೈತನ್ಯ”* ಲೋಕಾರ್ಪಣೆ

ಸಕಲೇಶಪುರ: ತಾಲ್ಲೂಕು ಚುಟುಕು ಸಾಹಿತ್ಯ ಪರಿಷತ್ ವತಿಯಿಂದ ಏ. 28 ರಂದು ಚುಟುಕು ಕವಿ ಕಾವ್ಯ ಕಾಜಾಣ ಮತ್ತು ರಾಜ್ಯ ಮಟ್ಟದ ಚುಟುಕು ಕವಿಗೋಷ್ಠಿ ಹಾಗೂ ಬಸವಶ್ರೀ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ತಾಲ್ಲೂಕು ಚುಸಾಪ ಅಧ್ಯಕ್ಷ ಮಲ್ಲೇಶ್ ಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾರ್ಯಕ್ರಮವು ಸಕಲೇಶಪುರ ಪಟ್ಟಣದ ಲಯನ್ಸ್ ಸಭಾಂಗಣದ ಜಾನಪದ ಜಂಗಮ ಎಸ್.ಕೆ ಕರೀಂ ಖಾನ್ ವೇದಿಕೆಯಲ್ಲಿ ಬೆಳಗ್ಗೆ 9 ಗಂಟೆಗೆ ಆರಂಭವಾಗಲಿದೆ, ಉದ್ಘಾಟನೆಯನ್ನು ಪರಿಷತ್ ಸಂಸ್ಥಾಪಕರಾದ ಡಾ ಎಂ ಜಿ ಆರ್ ಅರಸ್ ನೆರವೇರಿಸುವರು. ಹಾಸನ ಜಿಲ್ಲಾಧ್ಯಕ್ಷ ಬಾ.ನಂ ಲೋಕೇಶ್ ಅಧ್ಯಕ್ಷತೆ ವಹಿಸುವರು. ಶಾಸಕರಾದ ಸಿಮೆಂಟ್ ಮಂಜು ಅವರು ಬಸವೇಶ್ವರ ಪುತ್ತಳಿಗೆ ಮಾಲಾರ್ಪಣೆ ಮಾಡುವರು. ಯಸಳೂರಿನ ತೆಂಕಲಗೂಡು ಬೃಹನ್ಮಠದ ಶ್ರೀ ಶ್ರೀ ಶ್ರೀ ಷ. ಬ್ರ. ಚನ್ನಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿಯವರು ದಿವ್ಯ ಸಾನಿಧ್ಯ ವಹಿಸುವರು.

ಚುಟುಕು ಸಾಹಿತ್ಯ ಪರಿಷತ್ತು, ಮೈಸೂರು ಜಿಲ್ಲಾಧ್ಯಕ್ಷರಾದ ಶ್ರೀಮತಿ ರತ್ನ ಹಾಲಪ್ಪ ಗೌಡ ರವರು ಕೃತಿಯನ್ನು ಬಿಡುಗಡೆ ಮಾಡಲಿದ್ದಾರೆ.

  ಈ ಸಮ್ಮೇಳನದಲ್ಲಿ ಹಾಸನ ಜಿಲ್ಲೆಯ, ಸಕಲೇಶಪುರ ತಾಲ್ಲೂಕಿನ ಖ್ಯಾತ ಬರಹಗಾರ, *ಕತ್ತರಿ ಘಟ್ಟ ಮತ್ತು ಹರಿಸೇವಾ, ನೆನಪುಗಳ ಖಾತೆ ,ಬಾಳೊಂದು* *ಚೈತ್ರಾಮಯ* ಕೃತಿಗಳ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ಪಾದಾರ್ಪಣೆ ಮಾಡಿರುವ ಶ್ರೀ ವಿಶ್ವಾಸ್.ಡಿ.ಗೌಡ ರವರ *ಚೈತ್ರದ ಚೈತನ್ಯ ‌ ಎಂಬ* 4ನೇ ಕೃತಿಯು ಇದೇ ಕಾರ್ಯಕ್ರಮದಲ್ಲಿ ಲೋಕಾರ್ಪಣೆಯಾಗಲಿದೆ. ಇತ್ತೀಚೆಗೆ ಪತ್ರಿಕೆಗಳಲ್ಲಿ ತಮ್ಮ ಬರಹಗಳ ಮೂಲಕ ಖ್ಯಾತಿ ಪಡೆದಿರುವ ವಿಶ್ವಾಸ್ ರವರು ತಮ್ಮ ಅಂಕಣ ಬರಹಗಳನ್ನೆಲ್ಲ ಸೇರಿಸಿ ಸುಂದರವಾದ 4ನೇ ಕೃತಿಯೊಂದನ್ನು ಮಾಡಿದ್ದಾರೆ. ಇವರ ಅನೇಕ ಕೃತಿಗಳು ಮುದ್ರಣ ಹಂತದಲ್ಲಿವೆ. ಮುದ್ರಣ ಹಂತದಲ್ಲಿರುವ ಕೃತಿಗಳು ಕೂಡ ಅಂಕಣ ಬರಹಗಳ ಜೊತೆಯಲ್ಲಿ ವಿಮರ್ಶಾ ಸಾಹಿತ್ಯದ ಕೃತಿಗಳಾಗಿದ್ದು,ಇವರ ಅನೇಕ ಉತ್ತಮ ಬರಹಗಳನ್ನು ಸೇರಿಸಿಕೊಂಡು *ಚೈತ್ರದ ಚೈತನ್ಯ* ಎಂಬ ಕೃತಿಯನ್ನು ಮಾಡಿದ್ದಾರೆ.ಈ  ಕೃತಿಯು ಈ ಸುಂದರವಾದ ಕಾರ್ಯಕ್ರಮದಲ್ಲಿ ಲೋಕಾರ್ಪಣೆಯಾಗಲಿದೆ.

Leave a Reply

Your email address will not be published. Required fields are marked *

error: Content is protected !!