‘ವೈಚಾರಿಕ ‘ಸಂಜೆ ದಿನಪತ್ರಿಕೆ ಮತ್ತು ‘ಮಹಿಳಾ ಜಾಗೃತಿ ಅಸೋಸಿಯೇಷನ್ (ರಿ)’ ಸಕಲೇಶಪುರ  ಇವರ ವತಿಯಿಂದ 28-04-2025 ನೇ ಸೋಮವಾರದಂದು   ಉಚಿತ ನೇತ್ರ ತಪಾಸಣೆ ಹಾಗೂ ಶಸ್ತ್ರಚಿಕಿತ್ಸೆ ಶಿಬಿರ

ವೈಚಾರಿಕ ಸಂಜೆ ದಿನಪತ್ರಿಕೆ ಮತ್ತು ಮಹಿಳಾ ಜಾಗೃತಿ ಅಸೋಸಿಯೇಷನ್ (ರಿ) ಸಕಲೇಶಪುರ  ವತಿಯಿಂದ 28-04-2025 ನೇ ಸೋಮವಾರದಂದು   ಉಚಿತ ನೇತ್ರ ತಪಾಸಣೆ ಹಾಗೂ ಶಸ್ತ್ರಚಿಕಿತ್ಸೆ ಶಿಬಿರ.



ಸಕಲೇಶಪುರ:- “ವೈಚಾರಿಕ” ಸಂಜೆ ದಿನಪತ್ರಿಕೆ ಮತ್ತು “ಮಹಿಳಾ ಜಾಗೃತಿ ಅಸೋಸಿಯೇಷನ್ (ರಿ) “ಸಕಲೇಶಪುರ  ವತಿಯಿಂದ ಈ ತಿಂಗಳ 28-04-2025 ನೇ ಸೋಮವಾರದಂದು ಹಾನುಬಾಳು ಗ್ರಾಮಪಂಚಾಯಿತಿಯ ಸಂವಿಧಾನ ಶಿಲ್ಪಿ ಡಾಕ್ಟರ್ ಬಿ.ಆರ್ ಅಂಬೇಡ್ಕರ್ ಭವನದ” ಜ್ಞಾನ ಸೂರ್ಯ ಸಭಾಂಗಣದಲ್ಲಿ   ಬೆಳಗ್ಗೆ  10 ಗಂಟೆಯಿಂದ ಮಧ್ಯಾಹ್ನ  2 ಗಂಟೆವರೆಗೆ  ಉಚಿತ ನೇತ್ರ ತಪಾಸಣೆ ಹಾಗೂ ಶಸ್ತ್ರಚಿಕಿತ್ಸೆ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.

ಹಾನುಬಾಳು,ದೇವಲಕೆರೆ, ಕ್ಯಾಮನಹಳ್ಳಿ ಹಾಗೂ ಹೆಬ್ಬಾಸಾಲೆ ಗ್ರಾಮಪಂಚಾಯಿತಿಯ ಸುತ್ತಮುತ್ತಲಿನ ಗ್ರಾಮದವರು   ಇದರ ಉಪಯೋಗವನ್ನು ಪಡೆದುಕೊಳ್ಳುವಂತಾಗಲಿ ಎಂದು ವೈಚಾರಿಕ ದಿನಪತ್ರಿಕೆ ಸಂಪಾದಕರಾದ ವೆಂಕಟೇಶ್ ಬ್ಯಾಕರವಳ್ಳಿ  ಹಾಗೂ ಸಕಲೇಶಪುರ  ಮಹಿಳಾ ಜಾಗೃತಿ ಅಸೋಸಿಯೇಷನ್ (ರಿ) ಅಧ್ಯಕ್ಷರಾದ  ಕಲ್ಪನಾ ಕೀರ್ತಿ ತಿಳಿಸಿದ್ದಾರೆ.

ವಿಶೇಷ ಸೂಚನೆ:- 1.ಶಿಬಿರ ನಡೆದ ದಿನವೇ ಕರೆದುಕೊಂಡು ಹೋಗಿ ಕಂಪ್ಯೂಟರ್ ಲೇಸರ್  ಮುಖಾಂತರ  ಶಸ್ತ್ರಚಿಕಿತ್ಸೆ ಮಾಡಿ ಬಳಿಕ  ನಿಮ್ಮ ಸ್ಥಳಕ್ಕೆ ತಲುಪಿಸುವ   ಉಚಿತ  ಬಸ್ ಸೌಕರ್ಯವಿರುತ್ತದೆ.

2.ಶಿಬಿರಕ್ಕೆ ರೋಗಿಗಳು ಬರುವಾಗ ತಲೆಗೆ ಸ್ನಾನ ಮತ್ತು ಪುರುಷರು ಮುಖ ಕ್ಷೌರ ಮಾಡಿ, ಶುಭ್ರವಾದ ಬಟ್ಟೆಯನ್ನು ಧರಿಸಿ ಬರಬೇಕು.

3.ಆಸ್ಪತ್ರೆಯಲ್ಲಿ ಉಚಿತ ಊಟದ ಸೌಲಭ್ಯ ಇರುತ್ತದೆ.
ಆಸ್ಪತೆಯಲ್ಲಿ 2 ದಿನಗಳ ಮಟ್ಟಿಗೆ ತಂಗಲು ಬೇಕಾಗುವ ಟವಲ್ ಸೋಪು, ಬಪ್, ಬಟ್ಟೆ, ತಟ್ಟೆ, ಲೋಟ ಇತ್ಯಾದಿಗಳನ್ನು ತರುವುದು.

ಸೂಚನೆ :- ಆಧಾರ್ ಕಾರ್ಡ್ (ಜೆರಾಕ್ಸ್ 2ಪ್ರತಿ) ಹಾಗೂ ಮೊಬೈಲ್ ಸಂಖ್ಯೆ ಕಡ್ಡಾಯವಾಗಿ ತರಬೇಕು. ಯಶಸ್ವಿನಿ ಕಾರ್ಡ್ ಮತ್ತು ಧರ್ಮಸ್ಥಳ ಸಂಘದ ಕಾರ್ಡ್ ಇರುವವರು ತರಬೇಕು.

ಸಂಪರ್ಕಿಸಿ :-
1.ಯಶವಂತ್  ಕಡಗರವಳ್ಳಿ:-9353526694
ವೈಚಾರಿಕ ಪತ್ರಿಕೆ, ವ್ಯವಸ್ಥಾಪಕ ಸಂಪಾದಕರು

2.ಕಾವ್ಯ ಕೆಸಗನಹಳ್ಳಿ  :- 8296901588
ಉಪಾಧ್ಯಕ್ಷರು ಮಹಿಳಾ ಜಾಗೃತಿ ಅಸೋಸಿಯೇಷನ್ (ರಿ)
3.ಪ್ರಮೀಳಾ ಹೆತ್ತೂರು :- 9880846148
ಕಾರ್ಯದರ್ಶಿ ಮಹಿಳಾ ಜಾಗೃತಿ ಅಸೋಸಿಯೇಷನ್ (ರಿ)
4.ಪುಷ್ಪ ಸಿದ್ದಾಪುರ :- 7795778875
ಕಾರ್ಯದರ್ಶಿ, ಮಹಿಳಾ ಜಾಗೃತಿ ಅಸೋಸಿಯೇಷನ್ (ರಿ)

Leave a Reply

Your email address will not be published. Required fields are marked *

error: Content is protected !!