



ಸಕಲೇಶಪುರ:- ಪ್ರತಿದಿನ ಸಂಚರಿಸುವ ಇಂಟರ್ಸಿಟಿ ರೈಲು ವಿಸ್ತರಣೆಗಾಗಿ ಕರವೇ ಅಧ್ಯಕ್ಷರಿಂದ ರೈಲ್ವೆ ಸಚಿವರಿಗೆ ಮನವಿ.
ಕೆಲವು ವರ್ಷಗಳಿಂದ ಪ್ರತಿದಿನ ಬೆಳಿಗ್ಗೆ ಏಳು ಗಂಟೆಗೆ ಹಾಸನದಿಂದ ಬೆಂಗಳೂರಿಗೆ ಹೊರಟು ಸಂಜೆ 6:00 ಗಂಟೆಗೆ ಬೆಂಗಳೂರಿನಿಂದ ಹಾಸನಕ್ಕೆ ಬಂದು ನಿಲ್ಲುವ ಇಂಟರ್ ಸಿಟಿ ರೈಲನ್ನು ಸಕಲೇಶಪುರದವರೆಗೆ ವಿಸ್ತರಿಸುವಂತೆ ಅನೇಕ ಬಾರಿ ರೈಲ್ವೆ ಸಚಿವರುಗಳಿಗೆ ಮನವಿಯನ್ನು ಸಲ್ಲಿಸಿದ್ದರು. ಇಲ್ಲಿಯವರೆಗೂ ಯಾವುದೇ ಕ್ರಮ ಕೈಗೊಳ್ಳದೆ ಇರುವ ಬಗ್ಗೆ ನಾಗರಿಕರು ಬೇಸರ ವ್ಯಕ್ತಪಡಿಸಿರುತ್ತಾರೆ. ಪ್ರತಿದಿನ ಹಾಸನಕ್ಕೆ ಬಂದು ತಂಗುವ ರೈಲು ಸಕಲೇಶಪುರದವರೆಗೆ ವಿಸ್ತರಿಸಿದರೆ ಸಕಲೇಶಪುರವು ನಮ್ಮ ರಾಜ್ಯದಲ್ಲೇ ಪ್ರಮುಖ ಪ್ರವಾಸಿ ತಾಣ ವಾಗಿರುವುದರಿಂದ ಈ ಭಾಗದ ಜನ ಸಾಮಾನ್ಯರ ಹಾಗೂ ಪ್ರವಾಸಿಗರ ಪ್ರಯಾಣಕ್ಕೆ ಬಹಳ ಅನುಕೂಲವಾಗುತ್ತದೆ. ಮತ್ತು ಸಕಲೇಶಪುರದಿಂದ ಕರಾವಳಿ ಭಾಗದ ಸ್ಥಳಗಳಿಗೆ ತೆರಳಲು ಇದರಿಂದ ಸುಲಭವಾಗುತ್ತದೆ. ಹಾಗೂ ವಿಶ್ವ ಪ್ರಸಿದ್ಧ ಚನ್ನಕೇಶವ ದೇವಸ್ಥಾನ ಇರುವ ಬೇಲೂರು ಮತ್ತು ಹೊಯ್ಸಳರ ನಾಡು ಹಳೇಬೀಡು ಯಾತ್ರಾ ಸ್ಥಳಗಳನ್ನು ಭೇಟಿ ಮಾಡಿ ಪುನಃ ಸಕಲೇಶಪುರದ ಪ್ರಕೃತಿ ಸೌಂದರ್ಯವನ್ನು ಸವಿದು ಅಲ್ಲದೆ ಮಲೆನಾಡಿನ ವಾಣಿಜ್ಯ ಬೆಳೆಗಳಾದ ಕಾಫಿ ಮೆಣಸು ಏಲಕ್ಕಿ ಇವುಗಳನ್ನು ವ್ಯಾಪಾರ ವಹಿವಾಟಿಗಾಗಿ ರಾಜಧಾನಿಗೆ ಕೊಂಡೊಯ್ಯಲು ಅನುಕೂಲವಾಗುವುದರಿಂದ ಮತ್ತು ಈ ಭಾಗದ ವ್ಯಾಪಾರಸ್ಥರು, ವಿದ್ಯಾರ್ಥಿಗಳು, ಹಾಗೂ ಆಸ್ಪತ್ರೆಯ ಚಿಕಿತ್ಸೆಗಾಗಿ ಬೆಂಗಳೂರಿಗೆ ಹೋಗಿ, ಸಂಜೆ ವಾಪಸ್ಸು ಬರಲು ಅನುಕೂಲವಾಗುತ್ತದೆ. ಪ್ರತಿದಿನ ಮಲೆನಾಡಿನ ಈ ಭಾಗದಿಂದ ಸಾವಿರಾರು ಜನರು ಬೆಂಗಳೂರಿಗೆ ಹಲವಾರು ಕಾರಣಗಳಿಗೆ ಹೋಗಿ ಬರುವುದರಿಂದ ಈ ಇಂಟರ್ ಸಿಟಿ ರೈಲನ್ನು ಪ್ರತಿದಿನ ಸಕಲೇಶಪುರದವರಿಗೆ ವಿಸ್ತರಿಸಿದರೆ ಜನಸಾಮಾನ್ಯರಿಗೆ ಅನುಕೂಲವಾಗುತ್ತದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ಸಕಲೇಶಪುರ ತಾಲೂಕು ಅಧ್ಯಕ್ಷರಾದ ರಮೇಶ್ ಪೂಜಾರಿ ಮತ್ತು ಸಕಲೇಶಪುರ ಟಿ.ಎ.ಪಿ.ಸಿ.ಎಂ.ಎಸ್.ಅಧ್ಯಕ್ಷರು ಹಾಗೂ ಬಿಜೆಪಿ ಮುಖಂಡರು ಮತ್ತು ರಕ್ಷಣಾ ವೇದಿಕೆಯ ಗೌರವಾಧ್ಯಕ್ಷರು ಆದ ಯು.ಪಿ. ಶಶಿಕುಮಾರ್, ಮತ್ತು ರಕ್ಷಣಾ ವೇದಿಕೆಯ ಪ್ರಧಾನ ಕಾರ್ಯದರ್ಶಿಯಾದ ರವಿ ಅಗ್ನಿ ಇವರು ಮಾನ್ಯ ರೈಲ್ವೆ ರಾಜ್ಯ ಸಚಿವರಾದ ಶ್ರೀ ವಿ.ಸೋಮಣ್ಣನವರಿಗೆ ತುಮಕೂರಿನ ಕಚೇರಿಯಲ್ಲಿ ಮನವಿಯನ್ನು ಸಲ್ಲಿಸಿದರು.