ಹಾನುಬಾಳುವಿನಲ್ಲಿ ಯಶಸ್ವಿಯಾಗಿ ನಡೆದ ಉಚಿತ ನೇತ್ರ ತಪಾಸಣೆ ಮತ್ತು ಶಸ್ತ್ರಚಿಕಿತ್ಸೆ ಶಿಬಿರ ಕಾರ್ಯಕ್ರಮ

ಹಾನುಬಾಳುವಿನಲ್ಲಿ ಯಶಸ್ವಿಯಾಗಿ ನಡೆದ  ಉಚಿತ ನೇತ್ರ ತಪಾಸಣೆ ಮತ್ತು  ಶಸ್ತ್ರಚಿಕಿತ್ಸೆ ಶಿಬಿರ ಕಾರ್ಯಕ್ರಮ.:-

ಸಕಲೇಶಪುರ:- “ವೈಚಾರಿಕ” ಸಂಜೆ ದಿನಪತ್ರಿಕೆ ಮತ್ತು “ಮಹಿಳಾ ಜಾಗೃತಿ ಅಸೋಸಿಯೇಷನ್ (ರಿ) “ಸಕಲೇಶಪುರ  ವತಿಯಿಂದ  ಇಂದು ಹಾನುಬಾಳು ಗ್ರಾಮಪಂಚಾಯಿತಿಯ ಸಂವಿಧಾನ ಶಿಲ್ಪಿ ಡಾಕ್ಟರ್ ಬಿ.ಆರ್ ಅಂಬೇಡ್ಕರ್ ಭವನದ” ಜ್ಞಾನ ಸೂರ್ಯ ಸಭಾಂಗಣದಲ್ಲಿ    ಉಚಿತ ನೇತ್ರ ತಪಾಸಣೆ ಮತ್ತು ಶಸ್ತ್ರಚಿಕಿತ್ಸೆ ಹಾಗೂ ಮಧುಮೇಹ ಹಾಗೂ ಅಧಿಕಾರ ರಕ್ತದೊತ್ತಡ ಕ್ಕೆ ಸಂಬಂಧಪಟ್ಟ  ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.ಈ ಕಾರ್ಯಕ್ರಮದ   ಉದ್ಘಾಟನೆಯನ್ನು ಹಾನುಬಾಳು ಗ್ರಾಮಪಂಚಾಯಿತಿಯ ಅಧ್ಯಕ್ಷರಾದ ಸಂತೋಷ ಉದ್ಘಾಟನೆ ಮಾಡಿ ”  ಈ ಕಾರ್ಯಕ್ರಮದ ಉಪಯೋಗವನ್ನು ಗ್ರಾಮಸ್ಥರು ಪಡೆದುಕೊಳ್ಳಿ.ಇಂತಹ ಕಾರ್ಯಕ್ರಮ ಆಯೋಜನೆ ಮಾಡಿದ ವೈಚಾರಿಕ” ಸಂಜೆ ದಿನಪತ್ರಿಕೆ ಮತ್ತು “ಮಹಿಳಾ ಜಾಗೃತಿ ಅಸೋಸಿಯೇಷನ್ (ರಿ) ಅವರಿಗೆ ಧನ್ಯವಾದಗಳು. ಎಂದು ಹೇಳಿದರು.

  ಮುಖ್ಯ ಅತಿಥಿಗಳಾಗಿ ಆಗಮಿಸಿದ ಶಿಬಿರಕ್ಕೆ ಚಾಲನೆ ನೀಡಿದ ತಾಲ್ಲೂಕು ಅರೋಗ್ಯ ಅಧಿಕಾರಿ ಮಹೇಶ್ ಮಾತನಾಡುತ್ತಾ  ” ಮನುಷ್ಯನಿಗೆ ಆರೋಗ್ಯ ಅತಿ ಮುಖ್ಯವಾದದ್ದು, ಅದನ್ನು ಪಡೆದುಕೊಳ್ಳುವುದು ನಮ್ಮ ಕೈಯಲ್ಲಿದೆ. ಆದಷ್ಟು ಆಹಾರ  ಪದ್ಧತಿಯ ಕ್ರಮವನ್ನು ಆರೋಗ್ಯದ ದೃಷ್ಟಿಯಿಂದ ಕಾಲ ಕಾಲಕ್ಕೆ ಬದಲಾಯಿಸುತ್ತಾ ಹೋಗಬೇಕು.   ಬಿಸಿಲು ಕಾಲದಲ್ಲಿ ನೀರಿನ ಅವಶ್ಯಕತೆ ಅಧಿಕವಾಗದ್ದು ಹೆಚ್ಚು ನೀರನ್ನು ಕುಡಿಯುವುದರಿಂದ ಬಿಸಿಲಿನಿಂದ ಆಗುವ ಅನಾರೋಗ್ಯವನ್ನು ತಪ್ಪಿಸಬಹುದು.  ಇಂತಹ ಆರೋಗ್ಯ ಕಾರ್ಯಕ್ರಮಗಳನ್ನು ಜನರು ಹೆಚ್ಚು ಸದುಪಯೋಗ ಪಡೆದುಕೊಳ್ಳಲು ತಾವು ತಿಳಿದುಕೊಂಡು ಇತರರಿಗೂ ಹೇಳುವ ಮೂಲಕ ಇದರ ಪ್ರಯೋಜನವನ್ನು ಪಡೆಯುವಂತಾಗಬೇಕು. ಈ ತರದ ಆರೋಗ್ಯದ ಕಾರ್ಯಕ್ರಮಗಳನ್ನು ವೈಚಾರಿಕ ಪತ್ರಿಕೆಯವರು ಹಾಗೂ ಮಹಿಳಾ ಜಾಗೃತಿ ಅಸೋಸಿಯೇಷನ್ ಸಂಘದವರು ನಡೆಸುತ್ತಿರುವುದು ಶ್ಲಾಘನೀಯ ವಿಷಯ. ಇದರ ಉಪಯೋಗವನ್ನು ಹೆಚ್ಚು ಜನರು ಸದುಪಯೋಗಪಡಿಸಿಕೊಳ್ಳುವಂತಾಗಬೇಕು. ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ  ಹಾನುಬಾಳು ಗ್ರಾಮಪಂಚಾಯಿತಿ ಅಭಿರುದ್ದಿ ಅಧಿಕಾರಿ ಹರೀಶ್ ಶೆಟ್ಟಿ,ಹಾನುಬಾಳು ಪ್ರಾಥಮಿಕ ಅರೋಗ್ಯ ಅಧಿಕಾರಿ ನಿಶ್ಚಯ್, ವೈಚಾರಿಕ ದಿನಪತ್ರಿಕೆ ಸಂಪಾದಕರಾದ ಬ್ಯಾಕರವಳ್ಳಿ ವೆಂಕಟೇಶ್,ಮಹಿಳಾ ಜಾಗೃತಿ ಅಸೋಸಿಯೇಷನ್ (ರಿ)  ಅಧ್ಯಕ್ಷರಾದ ಕಲ್ಪನಾ ಕೀರ್ತಿ, ಹಾಗೂ ಆದಿಚುಂಚನಗಿರಿ  ಆಸ್ಪತ್ರೆಯ ವೈದ್ಯರುಗಳಾದ  ಡಾಕ್ಟರ್ ಶಹನಾ, ಹಾಗೂ ಡಾಕ್ಟರ್ ಅಶ್ವಿನಿ  ಇನ್ನು ಮುಂತಾದವರು ಉಪಸ್ಥಿತರಿದ್ದರು .

Leave a Reply

Your email address will not be published. Required fields are marked *

error: Content is protected !!